ಆಸಿಸ್ ಒಂದೇ ಅಲ್ಲ, ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಪಾಂಡ್ಯಾ, ಕೆಎಲ್ ರಾಹುಲ್ ಔಟ್

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಕ್ರಿಕೆಟಿಗಾರದ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ರನ್ನು ಹಾಲಿ ಆಸ್ಟ್ರೇಲಿಯಾ ಸರಣಿಯಿಂದಷ್ಟೇ ಅಲ್ಲದೇ ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಕಿತ್ತೊಗೆಯಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಕ್ರಿಕೆಟಿಗಾರದ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ರನ್ನು ಹಾಲಿ ಆಸ್ಟ್ರೇಲಿಯಾ ಸರಣಿಯಿಂದಷ್ಟೇ ಅಲ್ಲದೇ ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಕಿತ್ತೊಗೆಯಲಾಗಿದೆ.
ಮೂಲಗಳ ಪ್ರಕಾರ ಈ ಬಗ್ಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿದ್ದು, ಪಾಂಡ್ಯಾ ಮತ್ತು ಕೆಎಲ್ ರಾಹುಲ್ ರನ್ನು ಹಾಲಿ ಆಸ್ಟ್ರೇಲಿಯಾ ಪ್ರವಾಸದಿಂದ ಮಾತ್ರವಲ್ಲದೇ ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಕೈಬಿಡಲು ನಿರ್ಧರಿಸಲಾಗಿದೆ. ದೇಶೀಯ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಶುಭ್ ಮನ್ ಗಿಲ್, ವಿಜಯ್ ಶಂಕರ್ ಅವರಿಗೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಈ ಬಗ್ಗೆ ತನ್ನ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. 
ಇನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಹಾರ್ದಿಕ್ ಪಾಂಡ್ಯಾ, ಕೆಎಲ್ ರಾಹುಲ್ ರಿಗೆ 2 ಏಕದಿನ ಪಂದ್ಯಗಳ ನಿಷೇಧ ಹೇರುವಂತೆ ಬಿಸಿಸಿಐ ಆಡಳಿತ ಮಂಡಳಿ ಅಧ್ಯಕ್ಷ ವಿನೋದ್ ರಾಯ್ ಅವರು ಶಿಫಾರಸ್ಸು ಮಾಡಿದ್ದಾರೆಯಾದರೂ, ಆಡಳಿತ ಮಂಡಳಿ ಸದಸ್ಯೆ ಡಯಾನಾ ಎಡುಲ್ಜಿ ಅವರು ವಿಚಾರಣೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲ್ಲಿದ್ದಾರೆ. ಮೂಲಗಳ ಪ್ರಕಾರ ಅಸಭ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಆಡಳಿತ ಮಂಡಳಿ ಇಬ್ಬರೂ ಆಟಗಾರರ ಮೇಲೆ ತಿಂಗಳುಗಳ ಕಾಲ ನಿಷೇದ ಹೇರುವ ಸಾಧ್ಯತೆ ಇದೆ.
ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಇವರಿಬ್ಬರ ಸ್ಥಾನಕ್ಕೆ ಗಿಲ್ ಮತ್ತು ವಿಜಯ್ ಶಂಕರ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com