ಹಾರ್ದಿಕ್ ಪಾಂಡ್ಯ ಅಶ್ಲೀಲ ಹೇಳಿಕೆಗೆ ಹಾಟ್ ಬೆಡಗಿ ರಾಖಿ ಸಾವಂತ್ ಟಾಂಗ್!

ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಶ್ಲೀಲ ಹೇಳಿಕೆಯಿಂದ ಅವರ ಕ್ರಿಕೆಟ್ ಬದುಕಿಗೆ ತೀವ್ರ ಹಿನ್ನಡೆಯಾಗಿದೆ. ಇನ್ನು ಪಾಂಡ್ಯರ ಸೆಕ್ಸಿಯೆಸ್ಟ್ ಹೇಳಿಕೆಗೆ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್...
ಹಾರ್ದಿಕ್ ಪಾಂಡ್ಯ-ರಾಖಿ ಸಾವಂತ್
ಹಾರ್ದಿಕ್ ಪಾಂಡ್ಯ-ರಾಖಿ ಸಾವಂತ್
ಮುಂಬೈ: ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಶ್ಲೀಲ ಹೇಳಿಕೆಯಿಂದ ಅವರ ಕ್ರಿಕೆಟ್ ಬದುಕಿಗೆ ತೀವ್ರ ಹಿನ್ನಡೆಯಾಗಿದೆ. ಇನ್ನು ಪಾಂಡ್ಯರ ಸೆಕ್ಸಿಯೆಸ್ಟ್ ಹೇಳಿಕೆಗೆ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಟಾಂಗ್ ನೀಡಿದ್ದಾರೆ. 
ಹಾರ್ದಿಕ್ ಪಾಂಡ್ಯರ ಸೆಕ್ಸಿಯೆಸ್ಟ್ ಹೇಳಿಕೆಯಿಂದ ನನಗೆ ತುಂಬಾ ಬೇಸರವಾಗಿದೆ. ಈಗ ನಾನು ಹಾರ್ದಿಕ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಹಾರ್ದಿಕ್ ಅವರೇ ಕೆಲವು ಬಾರಿ ಹುಡುಗರು ಹಿಂದಿನಿಂದ ಚೆನ್ನಾಗಿ ಕಾಣಿಸುತ್ತಾರೆ. ನೀವು ನೋಡುವಾಗ ಹುಡುಗಿ ಬದಲು ಅದು ಹುಡುಗ ಆಗಿದ್ದರೆ ಆಗ ನೀವು ಏನು ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ. 
ಬಾಲಿವುಡ್ ನಟ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಭಾಗವಹಿಸಿದ್ದರು. ಈ ವೇಳೆ ಹಾರ್ದಿಕ್ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. 
ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಅವರು ನಾನು ಹುಡುಗಿಯರನ್ನು ಹಿಂದೆ ಕಡೆಯಿಂದ ನೋಡುತ್ತೇನೆ. ನನಗೆ ಇಷ್ಟ ಆದರೆ ಆಗ ನಾನು ನನ್ನ ತಾಯಿ ಬಳಿ ಹೋಗಿ ನಾನು ಇಂದು ಮಾಡಿ ಬಂದಿದ್ದೇನೆ ಎಂದು ಹೇಳುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಹಬ್ಬಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com