ಆಸೀಸ್ ವಿರುದ್ಧದ 3ನೇ ಏಕದಿನ ಪಂದ್ಯ: ಕಾಂಗರೊ ಪಡೆಗೆ ಆರಂಭಿಕ ಆಘಾತ ನೀಡಿದ ಭುವಿ!

ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮೋಡ ಕವಿದ ವಾತಾವಣರಣದಿಂದಾಗಿ 10 ನಿಮಿಷ ವಿಳಂಬವಾಗಿ ಪಂದ್ಯ ಆರಂಭವಾಗಿದ್ದು, ಆಸ್ಟ್ರೇಲಿಯಾ ಮೊದಲಿಗೆ  ಬ್ಯಾಟಿಂಗ್ ಮಾಡುತ್ತಿದೆ.

ಭುವನೇಶ್ವರ್ ಕುಮಾರ್ ಮೂರನೇ ಓವರ್ ನಲ್ಲಿಯೇ  ಆಸ್ಟ್ರೇಲಿಯಾದ ಅಲೆಕ್ಸ್  ಕ್ಯಾರಿ ಅವರ ವಿಕೆಟ್ ಪಡೆಯುವ ಮೂಲಕ ಆಸೀಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ.

ಮತ್ತೊಬ್ಬ ಬ್ಯಾಟ್ಸ್ ಮನ್  ಆರನ್ ಫಿಂಚ್ ಅವರನ್ನು ಎಲ್ ಬಿಡಬ್ಯ್ಲೂ ಬಲೆಗೆ  ಬೀಳಿಸುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾಗಿದ್ದಾರೆ.  ಇದರಿಂದಾಗಿ 9 ಓವರ್ ಗಳಲ್ಲಿಯೇ  ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ  ಆರಂಭಿಕವಾಗಿ ಹಿನ್ನೆಡೆ ಅನುಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com