ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದ ಭಾರತ: ಮ್ಯಾಚ್ ಫಿನಿಷರ್ ಧೋನಿಗೆ ಮ್ಯಾನ್ ಆಫ್ ದಿ ಸೀರಿಸ್!

ಆಸ್ಟ್ರೇಲಿಯಾ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗೆಲುವು ಸಾಧಿಸುವ ಮೂಲಕ ಭಾರತ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದು, ವಿಜಯವನ್ನು ಸಂಭ್ರಮಿಸಲು
ಧೋನಿ
ಧೋನಿ
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗೆಲುವು ಸಾಧಿಸುವ ಮೂಲಕ ಭಾರತ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದು, ವಿಜಯವನ್ನು ಸಂಭ್ರಮಿಸಲು ಭಾರತದ ಪಾಲಿಗೆ ಮತ್ತಷ್ಟು ಕಾರಣಗಳಿವೆ. 
2-1 ಅಂತರದಿಂದ ಸರಣಿಯನ್ನು ಗೆದ್ದಿರುವ ಭಾರತಕ್ಕೆ ನಿರ್ಣಾಯಕವಾದ ಎರಡೂ ಪಂದ್ಯಗಳಲ್ಲಿ ನೆರವಾದ ಎಂಎಸ್ ಧೋನಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ. ಮೊದಲ ಪಂದ್ಯದಲ್ಲಿ ಧೋನಿಯ ನಿಧಾನಗತಿಯ ಬ್ಯಾಟಿಂಗ್ ನಿಂದಲೇ ಪಂದ್ಯ ಸೋತಿದ್ದೆಂಬ ನಿಂದನೆ ಕೇಳಿಬಂದಿತ್ತು. ಆದರೆ ಉಳಿದ ಎರಡೂ ಪಂದ್ಯಗಳಲ್ಲಿ ಧೋನಿ ತಮ್ಮ ಟೀಕಾಕಾರರಿಗೆ ಬ್ಯಾಟ್ ನಿಂದಲೇ ಉತ್ತರ ನೀಡಿದ್ದು, ಈಗಲೂ ನಂಬಿಕಸ್ಥ ಬ್ಯಾಟ್ಸ್ ಮನ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 
2 ನೇ ಪಂದ್ಯ ಗೆದ್ದಾಗ ಧೋನಿ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದ  ಆಸ್ಟ್ರೇಲಿಯಾದ ಲೆಜೆಂಡ್ ಬೌಲರ್ ಜೇಸನ್ ಗಿಲ್ಲೆಸ್ಪಿ ಧೋನಿಗೆ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡುವುದು ತಿಳಿದಿದೆ. ಆದ್ದರಿಂದಲೇ ಧೋನಿ 10 ವರ್ಶಗಳಾದರು ತಂಡಕ್ಕೆ ನಂಬಿಕಸ್ಥ ಬ್ಯಾಟ್ಸ್ ಮನ್ ಆಗಿರೋದು, ಧೋನಿ ಅವರ ಮ್ಯಾಚ್ ಫಿನಿಷಿಂಗ್ ಸಾಮರ್ಥ್ಯದಿಂದ ಭಾರತ ಒಂದು ದಶಕದಿಂದ ಫಲ ಪಡೆದಿದೆ. ಈಗಲೂ ಧೋನಿ ಅವರ ಸಾಮರ್ಥ್ಯದಿಂದ ಭಾರತ ಲಾಭ ಪಡೆಯುತ್ತಿದೆ ಎಂದು ಗಿಲ್ಲೆಸ್ಪಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com