'ಬಾಲ್ ತಗೊಳ್ಳಿ, ಇಲ್ಲ.. ನಿವೃತ್ತಿ ಅಂತ ಬೊಬ್ಬೆ ಇಡ್ತಾರೆ': ಎಂಎಸ್ ಧೋನಿ

ಆಸ್ಚ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದು, ಆಸಿಸ್ ನೆಲದಲ್ಲಿ ಐತಿಹಾಸಿಕ ಸರಣಿ ಜಯ ಗಳಿಸಿದೆ. ಆದರೆ ಧೋನಿ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಂಜಯ್ ಬಂಗಾರ್ ಗೆ ಚೆಂಡನ್ನು ನೀಡಿದ ಧೋನಿ
ಸಂಜಯ್ ಬಂಗಾರ್ ಗೆ ಚೆಂಡನ್ನು ನೀಡಿದ ಧೋನಿ
ಮೆಲ್ಬೋರ್ನ್: ಆಸ್ಚ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದು, ಆಸಿಸ್ ನೆಲದಲ್ಲಿ ಐತಿಹಾಸಿಕ ಸರಣಿ ಜಯ ಗಳಿಸಿದೆ. ಆದರೆ ಧೋನಿ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಹೌದು ಇಷ್ಟಕ್ಕೂ ಆ ವಿಡಿಯೋ ಯಾವುದು ಗೊತ್ತಾ,.,.,. ಈ ಸುದ್ದಿ ಓದಿ..
ಇಂದು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಕಾಂಗರೂಗಳ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಸಿಸ್ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಏಕದಿನ ಸರಣಿಯಲ್ಲಿ ಮಣಿಸಿ ಸರಣಿಯನ್ನು ಭಾರತ ತಂಡ ತನ್ನ ಕೈವಶ ಮಾಡಿಕೊಂಡಿತು. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕೊನೆಯ ಕ್ಷಣದವರೆಗೂ ಕ್ರೀಸ್ ನಲ್ಲೇ ನಿಂತು ಅಜೇಯ 87 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.
ಪಂದ್ಯ ಮುಕ್ತಾಯದ ಬಳಿಕ ಚೆಂಡನ್ನು ಕೈಗೆ ತೆಗೆದುಕೊಂಡಿದ್ದ ಧೋನಿ ಅದೇನು ಎನ್ನಿಸಿತೋ ಏನೋ.. ಆಟಗಾರರೊಂದಿಗೆ ಪರಸ್ಪರ ಹಾಸ್ತಲಾಘವ ಮಾಡುವಾಗ ತಮ್ಮ ಬಳಿಗೆ ಬಂದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಗೆ ನೀಡಿ 'ಬಾಲ್ ತೆಗೆದುಕೊಳ್ಳಿ.. ಇಲ್ಲ ಮತ್ತೆ ನಿವೃತ್ತಿ ಎಂದು ಬೊಬ್ಬೆ ಇಡುತ್ತಾರೆ' ಎಂದು ಹಾಸ್ಯ ಚಟಾಕಿ ಹಾರಿಸಿದರು. ಧೋನಿ ಹಾಸ್ಯಕ್ಕೆ ಸಂಜಯ್ ಬಂಗಾರ್ ಕೂಡ ನಕ್ಕು ಬಾಲ್ ತೆಗೆದುಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಇನ್ನು ಈ ಹಿಂದೆ ಅಂದರೆ ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ಏಕದಿನ ಸರಣಿ ವೇಳೆ ಧೋನಿ ಅಂಪೈರ್ ಗಳಿಂದ ಬಾಲ್ ತೆಗೆದುಕೊಂಡಿದ್ದರು. ಇದನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದ ಕೆಲ ಪತ್ರಕರ್ತರು ಧೋನಿ ನಿವೃತ್ತಿ ಕುರಿತು ಯೋಚನೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಇಂಗ್ಲೆಂಡ್ ಪ್ರವಾಸದ ನೆನಪಿಗಾಗಿ ಬಾಲ್ ತೆಗೆದುಕೊಂಡರು ಎಂದು ವರದಿ ಮಾಡಿದ್ದರು. ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ್ದ ಕೋಚ್ ರವಿಶಾಸ್ತ್ರಿ. ಇದು ನಿವೃತ್ತಿಗಾಗಿ ತೆಗೆದುಕೊಂಡಿದ್ದಲ್ಲ. ಪಿಚ್ ನಲ್ಲಿ ಚೆಂಡು ಸಾಕಷ್ಟು ತಿರುವು ಪಡೆಯುತ್ತಿತ್ತು. ಈ ಬಗ್ಗೆ ಬ್ಯಾಟಿಂಗ್ ಕೋಚ್ ಬಂಗಾರ್ ಅವರಿಗೆ ತೋರಿಸಲಿಕ್ಕಾಗಿ ಧೋನಿ ಚೆಂಡನ್ನು ತೆಗೆದುಕೊಂಡಿದ್ದರು ಎಂದು ಸ್ಪಷ್ಟನೆ ನೀಡಿದ್ದರು.
ಅಷ್ಟು ಹೊತ್ತಿಗಾಗಲೇ ಈ ಸುದ್ದಿ ವ್ಯಾಪಕ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com