ವಿಶ್ವ ಕಪ್ ಸಿದ್ಧತೆಯಲ್ಲಿರುವ ಆಟಗಾರರಿಗೆ ಐಪಿಎಲ್ ನೆರವು - ಗೌತಮ್ ಗಂಭೀರ್

2019ರ ಐಪಿಎಲ್ ಪಂದ್ಯಗಳು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರೀಯ ಆಟಗಾರರಿಗೆ ನೆರವು ನೀಡಲಿವೆ ಎಂದು ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಗೌತಮ್  ಗಂಭೀರ್
ಗೌತಮ್ ಗಂಭೀರ್

ಬೆಂಗಳೂರು: 2019ರ ಐಪಿಎಲ್ ಪಂದ್ಯಗಳು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರೀಯ ಆಟಗಾರರಿಗೆ ನೆರವು ನೀಡಲಿವೆ ಎಂದು ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ  ಪ್ರಮುಖ ಆಟಗಾರರಿಗೆ ಟಿ-20 ಪಂದ್ಯಗಳಿಂದ ವಿಶ್ರಾಂತಿ ನೀಡಬೇಕೆಂದು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೇಳಿಬರುತ್ತಿವೆ.

ಈ ಬೆನ್ನಲ್ಲೇ  ಗೌತಮ್ ಗಂಭೀರ್ ಈ ಹೇಳಿಕೆ ನೀಡಿದ್ದು, ಈ ಪಂದ್ಯಗಳಲ್ಲಿ ಬೌಲರ್ ಗಳು ನಾಲ್ಕು ಓವರ್ ಮಾತ್ರ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ದೈಹಿಕವಾಗಿ ಬಳಲಿರುವುದಾಗಿ ಅನ್ನಿಸುವುದಿಲ್ಲ. ಐಪಿಎಲ್ ನಂತಹ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿದರೆ ವಿಶ್ವಕಪ್ ನಲ್ಲಿ ಹೇಗೆ ಆಡಬಹುದು ಎಂಬುದನ್ನು ಅರಿಯಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಐಪಿಎಲ್ ಪಂದ್ಯಗಳಲ್ಲಿ ಅತ್ಯುತ್ತಮ ಗುಣಮಟ್ಟದ ಆಟಗಾರರು ಪಾಲ್ಗೊಳ್ಳುವುದರಿಂದ ಅವರ ಶೈಲಿಯನ್ನು ಅನುಸರಿಸಲು ಸಾಧ್ಯವಾಗುತ್ತದೆ. ಇದೊಂದು ಉತ್ತಮ ಅವಕಾಶವಾಗಿದೆ. ವಿಶ್ವಕಪ್ ಗಾಗಿ ಐಪಿಎಲ್  ಪಂದ್ಯಗಳನ್ನು  ಕಳೆದುಕೊಳ್ಳುವ ಮಾತನ್ನು ನಿಲ್ಲಿಸಬೇಕಾಗಿದೆ. ಆ ರೀತಿಯಲ್ಲಿ ಯೋಚಿಸುವುದು ಸರಿಯಾದ ಮಾರ್ಗ ಅಲ್ಲ ಎಂದಿದ್ದಾರೆ.

ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆ. ಎಲ್. ರಾಹುಲ್ ಅವರನ್ನು  ಅಮಾನತು ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಗೌತಮ್ ಗಂಭೀರ್ ಇದರ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com