2019 ರ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ತಯರಾಗುವೆ: ಗಾಯಗೊಂಡ ಕ್ರಿಕೆಟಿಗ ಪೃಥ್ವಿ ಶಾ

ಐಪಿಎಲ್-2019 ಪ್ರಾರಂಭವಾಗುವ ವೇಳೆಗೆ ಸಂಪೂರ್ಣವಾಗಿ ತಯಾರಾಗುವೆ ಎಂದು ಗಾಯಗೊಂಡಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ ಹೇಳಿದ್ದಾರೆ.

Published: 22nd January 2019 12:00 PM  |   Last Updated: 22nd January 2019 09:43 AM   |  A+A-


Prithvi Shaw injury update: 19-year-old says will be fit before IPL 2019

2019 ರ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ತಯರಾಗುವೆ: ಗಾಯಗೊಂಡ ಕ್ರಿಕೆಟಿಗ ಪೃಥ್ವಿ ಶಾ

Posted By : SBV SBV
Source : Online Desk
ನವದೆಹಲಿ: ಐಪಿಎಲ್-2019 ಪ್ರಾರಂಭವಾಗುವ ವೇಳೆಗೆ ಸಂಪೂರ್ಣವಾಗಿ ತಯಾರಾಗುವೆ ಎಂದು ಗಾಯಗೊಂಡಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ ಹೇಳಿದ್ದಾರೆ. 

ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪೃಥ್ವಿ ಶಾ, ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ  ಪಾದದ ಕೀಲು ಗಾಯಕ್ಕೊಳಗಾಗಿದ್ದರಿಂದ ಸರಣಿಯಲ್ಲಿ ಆಡಲು ಆಗಿರಲಿಲ್ಲ. "ಅಶ್ವಿನ್ ಬೌಲಿಂಗ್ ಮಾಡುತ್ತಿದ್ದರು. ಕ್ಯಾಚ್ ಬಂದಿತು. ಹಿಂಭಾಗಕ್ಕೆ ಜಿಗಿದು ಕ್ಯಾಚ್ ಹಿಡಿದು ಕೆಳಗೆ ನಿಂತಾಗ ದೇಹದ ಸಂಪೂರ್ಣ ತೂಕ ಬಲಭಾಗದ ಕಾಲಿನ ಮೇಲೆ ಬಿತ್ತು. ಪಾದದ ಕೀಲು ತಿರುಚಿಕೊಂಡಿತು ಎಂದು ಪೃಥ್ವಿ ಶಾ ಗಾಯಗೊಂಡಿದ್ದನ್ನು ಸಂದರ್ಶನದಲ್ಲಿ ವಿವರಿಸಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ ಸವಾಲಿನ ಪರಿಸ್ಥಿತಿಯಲ್ಲಿ ಆಡಬೇಕೆಂಬುದು ನನ್ನ ಬಯಕೆಯಾಗಿತ್ತು. ಆದರೆ ಅದು ಗಾಯದ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ. ಆದರೆ 2019 ರ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ಗಾಯದ ಸಮಸ್ಯೆಯಿಂದ ಹೊರಬಂದು ತಯಾರಾಗುವೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp