ಯುವ ಆಟಗಾರರು ನೀಡುತ್ತಿರುವ ಪೈಪೋಟಿ ಬಗ್ಗೆ ಶಿಖರ್ ಧವನ್ ಹೇಳಿದ್ದು?

ಆರಂಭಿಕ ಆಟಗಾರ ಶಿಖರ್ ಧವನ್, ಯುವ ಆಟಗಾರರು ನೀಡುತ್ತಿರುವ ಪೈಪೋಟಿ ಬಗ್ಗೆ ಮಾತನಾಡಿದ್ದು, ಅದು ಆರೋಗ್ಯಕರ ಪೈಪೋಟಿ ಎಂದು ಬಣ್ಣಿಸಿದ್ದಾರೆ.
ಶಿಖರ್ ಧವನ್
ಶಿಖರ್ ಧವನ್
ಮೌಂಟ್ ಮಂಗೂನ್ಯು: ಆರಂಭಿಕ ಆಟಗಾರ ಶಿಖರ್ ಧವನ್,  ಯುವ ಆಟಗಾರರು ನೀಡುತ್ತಿರುವ ಪೈಪೋಟಿ ಬಗ್ಗೆ ಮಾತನಾಡಿದ್ದು, ಅದು ಆರೋಗ್ಯಕರ ಪೈಪೋಟಿ ಎಂದು ಬಣ್ಣಿಸಿದ್ದಾರೆ. 
ಪೃಥ್ವಿ ಶಾ ಹಾಗೂ ಶುಭ್ ಮನ್ ಗಿಲ್ ಅವರು ಶೀಘ್ರವಾಗಿ ಉತ್ತಮ ಪೈಪೋಟಿ ನೀಡುತ್ತಿದ್ದಾರೆ. ಇದು ಭಾರತದ ಮುಂಬರುವ ಟ್ಯಾಲೆಂಟ್ ಗಳು ಹಿಂದೆಂದಿಗಿಂತಲೂ ವೇಗವಾಗಿ ಪಕ್ವವಾಗುತ್ತಿವೆ ಎಂದು ಹೇಳಿದ್ದಾರೆ. 
"ಪೃಥ್ವಿ ಶಾ ರಂತಹ ಆಟಗಾರರು ಟೆಸ್ಟ್ ಗೆ ಪದಾರ್ಪಣೆ ಮಾಡಿದ ರೀತಿ ಹಾಗೂ ಶತಕ, 70 ರನ್ ಗಳನ್ನು ದಾಖಲಿಸಿದ್ದು, ನಮ್ಮ ತಂಡದ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಧವನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com