ಆಸಿಸ್ ಬಳಿಕ ನ್ಯೂಜಿಲೆಂಡ್ ನಲ್ಲೂ 'ಸರ್ಜಿಕಲ್ ಸ್ಟ್ರೈಕ್'; ಏಕದಿನ ಸರಣಿ ಭಾರತದ ವಶ

ಆಸ್ಟ್ರೇಲಿಯಾ ವಿರುದ್ಧದ ಸರಣಿ ಜಯದ ಬಳಿಕ ಇದೀಗ ಟೀಂ ಇಂಡಿಯಾ ನ್ಯೂಜಿಲೆಂಡ್ ನೆಲದಲ್ಲೂ ತನ್ನ ವಿಜಯ ಪತಾಕೆ ಹಾರಿಸಿದ್ದು, 3ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಏಕದಿನ ಸರಣಿಯನ್ನು ತನ್ನ ಕೈ ವಶ ಮಾಡಿಕೊಂಡಿದೆ.
ಟೀಂ ಇಂಡಿಯಾ ದಿಗ್ವಿಜಯ
ಟೀಂ ಇಂಡಿಯಾ ದಿಗ್ವಿಜಯ
ಬೇ ಓವಲ್: ಆಸ್ಟ್ರೇಲಿಯಾ ವಿರುದ್ಧದ ಸರಣಿ ಜಯದ ಬಳಿಕ ಇದೀಗ ಟೀಂ ಇಂಡಿಯಾ ನ್ಯೂಜಿಲೆಂಡ್ ನೆಲದಲ್ಲೂ ತನ್ನ ವಿಜಯ ಪತಾಕೆ ಹಾರಿಸಿದ್ದು, 3ನೇ ಏಕದಿನ ಪಂದ್ಯದಲ್ಲಿ  7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಏಕದಿನ ಸರಣಿಯನ್ನು ತನ್ನ ಕೈ ವಶ ಮಾಡಿಕೊಂಡಿದೆ.
ಇಂದು ಬೇ ಓವಲ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 245 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 43 ಓವರ್ ಗಳಲ್ಲಿಯೇ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆರಂಭಿಕ ಆಟಗಾರ ರೋಹಿತ್ ಶರ್ಮಾ (62 ರನ್), ಶಿಖರ್ ಧವನ್ (28 ರನ್), ವಿರಾಟ್ ಕೊಹ್ಲಿ (60 ರನ್), ಅಂಬಾಟಿ ರಾಯುಡು (ಅಜೇಯ 40 ರನ್) ಮತ್ತು ದಿನೇಶ್ ಕಾರ್ತಿಕ್ (ಅಜೇಯ 38) ಅವರ ಅಮೂಲ್ಯ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ಜಯ ಗಳಿಸಿತು.
ಕಿವೀಸ್ ಪಡೆಯ ಪ್ರಮುಖ ಮೂರು ವಿಕೆಟ್ ಪಡೆದ ಮಹಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನ್ಯೂಜಿಲೆಂಡ್ ನಲ್ಲಿ ಭಾರತಕ್ಕೆ ಇದು 2ನೇ ಏಕದಿನ ಸರಣಿ ಜಯವಾಗಿದೆ. ಇದಕ್ಕೂ ಮೊದಲು ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ತಂಡ 2009ರಲ್ಲಿ ಏಕದಿನ ಸರಣಿ ಜಯಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com