ಚೇತೇಶ್ವರ ಪೂಜಾರ 'ನಕಲಿ ಕ್ರೀಡಾಸ್ಫೂರ್ತಿ' ಸಮರ್ಥಿಸಿಕೊಂಡ ಕೋಚ್!

ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೋಸದಾಟ ಆಡಿ ಸೌರಾಷ್ಟ್ರ ತಂಡ ಫೈನಲ್...
ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ
ಬೆಂಗಳೂರು: ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೋಸದಾಟ ಆಡಿ ಸೌರಾಷ್ಟ್ರ ತಂಡ ಫೈನಲ್ ಪ್ರವೇಶಿಸುವಂತೆ ಮಾಡಿದ್ದ ಚೇತೇಶ್ವರ ಪೂಜಾರರನ್ನು ತಂಡ ಕೋಚ್ ಸಮರ್ಥಿಸಿಕೊಂಡಿದ್ದಾರೆ. 
ಸೌರಾಷ್ಟ್ರ ತಂಡ ಆಟಗಾರ ಚೇತೇಶ್ವರ ಪೂಜಾರ ಔಟಾಗಿದ್ದರೂ ಕ್ರೀಡಾ ಸ್ಫೂರ್ತಿ ಮರೆತು ಬ್ಯಾಟಿಂಗ್ ಮಾಡಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ಚೇತೇಶ್ವರ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ಚೀಟರ್ ಪೂಜಾರ ಎಂದು ಕರೆದಿದ್ದರು. 
ಚೇತೇಶ್ವರ ಪೂಜಾರ ಅವರು ಕ್ರೀಡಾ ಸ್ಫೂರ್ತಿ ಮರೆತು ಆಡಿಲ್ಲ. ಅಂಪೈರ್ ಔಟ್ ತೀರ್ಪು ನೀಡಿಲ್ಲ. ಅಷ್ಟಕ್ಕೂ ಕರ್ನಾಟಕ ಕ್ರಿಕೆಟಿಗರು ಔಟ್ ಇಲ್ಲದಿದ್ದರೂ ಸುಖಾಸುಮ್ಮನೆ ಅಪೀಲ್ ಮಾಡಿದ್ದಾರೆ. ಕ್ರೀಡಾ ಸ್ಫೂರ್ತಿ ಇದ್ದರೆ ಕೇವಲ ಔಟ್ ಇದ್ದರೆ ಮಾತ್ರ ಅಪೀಲ್ ಮಾಡಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ. 
ನನ್ನ ರಣಜಿ ಆಡುತ್ತಿದ್ದಾಗಲೂ ನಾನು 20 ರಿಂದ 30 ಬಾರಿ ಕೆಟ್ಟ ತೀರ್ಪಿಗೆ ಬಲಿಯಾಗಿದ್ದೆ. ಯಾರೂ ಕೂಡ ನನ್ನನ್ನು ವಾಪಸ್ ಕರೆಯಿಸಿ ಬ್ಯಾಟಿಂಗ್ ಮಾಡಲು ಹೇಳಿಲ್ಲ. ಹೀಗಾಗಿ ಪೂಜಾರಗೆ ಚೀಟರ್ ಎಂದು ಕರೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com