ಕೊಹ್ಲಿ ಪಡೆ ಪರಾಕ್ರಮ ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಗೆದ್ದ ಭಾರತ ವನಿತೆಯರು!

ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ವಿರಾಟ್ ಕೊಹ್ಲಿ ಪಡೆ ಗೆದ್ದು ಇತಿಹಾಸ ಸೃಷ್ಟಿಸಿದ ಬಳಿಕ ಇದೀಗ ಟೀಂ ಇಂಡಿಯಾದ ಮಹಿಳಾ ತಂಡ ಸಹ ಕಿವೀಸ್ ಕಿವಿಹಿಂಡಿ ಸರಣಿ ಗೆದ್ದುಕೊಂಡಿದೆ.

Published: 29th January 2019 12:00 PM  |   Last Updated: 29th January 2019 08:01 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೇ ಓವಲ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ವಿರಾಟ್ ಕೊಹ್ಲಿ ಪಡೆ ಗೆದ್ದು ಇತಿಹಾಸ ಸೃಷ್ಟಿಸಿದ ಬಳಿಕ ಇದೀಗ ಟೀಂ ಇಂಡಿಯಾದ ಮಹಿಳಾ ತಂಡ ಸಹ ಕಿವೀಸ್ ಕಿವಿಹಿಂಡಿ ಸರಣಿ ಗೆದ್ದುಕೊಂಡಿದೆ. 

ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 161 ರನ್ ಗಳಿಗೆ ಆಲೌಟ್ ಆಯಿತು. 162 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಮಹಿಳಾ ತಂಡ 35.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 166 ರನ್ ಪೇರಿಸಿ ಗೆಲುವು ಸಾಧಿಸಿತು.

ನ್ಯೂಜಿಲ್ಯಾಂಡ್ ಪರ ಡೌನ್ 15, ಅ್ಯಮಿ ಸಟರ್ಥ್ ವೈಟ್ 71, ಕಾಸ್ಪೆರ್ಕ್ 21 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಬೌಲಿಂಗ್ ನಲ್ಲಿ ಜುಲನ್ ಗೋಸ್ವಾಮಿ 3, ಬಿಸ್ತಾ, ದೀಪ್ತಿ ಶರ್ಮಾ ಹಾಗೂ ಪೂನಂ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ. 

ಟೀ ಇಂಡಿಯಾ ಪರ ಸ್ಮತಿ ಮಂದಾನ ಅಜೇಯ 90 ಹಾಗೂ ಮಿಥಾಲಿ ರಾಜ್ ಅಜೇಯ 63 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp