ಶೋಯಬ್ ಅಖ್ತರ್ ರಿಂದ ವೈಯಕ್ತಿಕ ದಾಳಿ: ಪಾಕ್ ನಾಯಕ ಸರ್ಫರಾಜ್ ಆರೋಪ

ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರು ಬುಧವಾರ ಆರೋಪಿಸಿದ್ದಾರೆ.
ಶೋಯಬ್ ಅಖ್ತರ್
ಶೋಯಬ್ ಅಖ್ತರ್
ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರು ಬುಧವಾರ ಆರೋಪಿಸಿದ್ದಾರೆ.
ನಾನು ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ ಮತ್ತು ಮುಂದೆ ಕ್ರಿಕೆಟ್ ಬಗ್ಗೆ ಹೆಚ್ಚು ಗಮನಹರಿಸಲು ನಿರ್ಧರಿಸಿದ್ದೇನೆ ಎಂದು 31 ವರ್ಷದ ಸರ್ಫರಾಜ್ ಅವರು ಹೇಳಿದ್ದಾರೆ.
ನನಗೆ ತಪ್ಪಿನ ಅರಿವಾಗಿದೆ ಮತ್ತು ಅದಕ್ಕಾಗಿ ಶಿಕ್ಷೆ ಸಹ ಅನುಭವಿಸಿದ್ದೇನೆ. ಆದರೂ 
ಶೋಯಬ್ ಅಖ್ತರ್ ಅವರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದು ಸರ್ಫರಾಜ್ ಹೇಳಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ.
ಕಳೆದ ವಾರ ದಕ್ಷಿಣ ಆಫ್ರಿಕಾ ಆಟಗಾರ ಆಂಡಿಲೆ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದ ಸರ್ಫರಾಜ್ ಅಹ್ಮದ್ ವಿರುದ್ಧ ರಾವಲ್ ಪಿಂಡಿ ಎಕ್ಸ್ ಪ್ರೆಸ್ ಶೋಯಬ್ ಅಖ್ತರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಸರ್ಫರಾಜ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು.
ಡರ್ಬನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕ್ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಉರ್ದುವಿನಲ್ಲಿ ಆಂಡಿಲೆಯನ್ನು 'ಲೇ ಕರಿಯ.. ನಿನ್ನ ಅಮ್ಮ ಇವತ್ತು ಎಲ್ಲಿ ಕೂತಿದ್ದಾಳೆ, ಇವತ್ತು ಏನ್ ಪ್ರಾರ್ಥನೆ ಮಾಡಿ ಬಂದಿದ್ದೀಯಾ? ಎಂದು ಹೇಳಿದ್ದು ಈ ಮಾತುಗಳು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿತ್ತು. ನಂತರ ಪಾಕ್ ನಾಯಕನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸರ್ಫರಾಜ್ ಅಹ್ಮದ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com