ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ರನೌಟ್: ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

ಕ್ರಿಕೆಟ್ ಇತಿಹಾಸದಲ್ಲಿ ವಿಚಿತ್ರ ರನೌಟ್ ಗಳ ಸಾಲು ದೊಡ್ಡದಿದೆ. ಇದೀಗ ಇದೇ ರೀತಿ ವಿಚಿತ್ರ ರನೌಟ್ ಆಗಿದ್ದು ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೆಲ್ಬರ್ನ್: ಕ್ರಿಕೆಟ್ ಇತಿಹಾಸದಲ್ಲಿ ವಿಚಿತ್ರ ರನೌಟ್ ಗಳ ಸಾಲು ದೊಡ್ಡದಿದೆ. ಇದೀಗ ಇದೇ ರೀತಿ ವಿಚಿತ್ರ ರನೌಟ್ ಆಗಿದ್ದು ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ.
ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ನಲ್ಲಿ ಮೆಲ್ಬರ್ನ್ ರೆನೆಗಡೆಸ್ ಮತ್ತು ಸಿಡ್ನಿ ಥಂಡರ್ ತಂಡಗಳ ನಡುವೆ ಪಂದ್ಯ ನಡೆದಿದ್ದು ಈ ವೇಳೆ ಸಿಡ್ನಿ ತಂಡದ ಜೋನಾಥನ್ ಹಾಗೂ ಗುರಿಂದರ್ ಸಂಧು ರನ್ ಪಡೆಯುವಾಗ ಮುಖಾಮುಖಿ ಡಿಕ್ಕಿಯಾಗಿದ್ದು ಚೆಂಡನ್ನು ಹಿಡಿಯುವ ವೇಳೆ ಬೌಲರ್ ಕೂಡ ಇವರ ಮಧ್ಯೆ ಸಿಕ್ಕಿಬಿದ್ದಿದ್ದನು. 
ಡಿಕ್ಕಿ ಬಳಿಕ ಮುಂದೆ ಹೋಗಿ ಬಿದ್ದ ಬೌಲರ್ ವಿಕೆಟ್ ಕೀಪರ್ ಕೈಗೆ ಚೆಂಡನ್ನು ಎಸೆಯುವ ಮೂಲಕ ಬೌಲರ್ ರನೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಇನ್ನು ಈ ಪಂದ್ಯದಲ್ಲಿ ಮೆಲ್ಬರ್ನ್ 27 ರನ್ ಗಳಿಂದ ಗೆಲುವು ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com