ಟೀಂ ಇಂಡಿಯಾ-ಸೌರವ್ ಗಂಗೂಲಿ
ಟೀಂ ಇಂಡಿಯಾ-ಸೌರವ್ ಗಂಗೂಲಿ

ಕೇಸರಿ ಜೆರ್ಸಿನೂ ಅಲ್ಲ, ಪಾಕ್ ಹೊರದಬ್ಬೋದು ಅಲ್ಲ; ಟೀಂ ಇಂಡಿಯಾ ಸೋಲಿಗೆ ದಾದಾ ಕೊಟ್ಟ ಕಾರಣವೇನು?

ಇಂಗ್ಲೆಂಡ್‌ ವಿರುದ್ಧ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಮಾಜಿ ನಾಯಕ ಸೌರವ್‌ ಗಂಗೂಲಿ ಎರಡು ಕಾರಣ ನೀಡಿದ್ದಾರೆ.
ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್‌ ವಿರುದ್ಧ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಮಾಜಿ ನಾಯಕ ಸೌರವ್‌ ಗಂಗೂಲಿ ಎರಡು ಕಾರಣ ನೀಡಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್‌ ನೀಡಿದ 338 ರನ್‌ ಗುರಿ ಹಿಂಬಾಲಿಸಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 306 ರನ್‌ ಗಳಿಸಿ 31 ರನ್‌ಗಳಿಂದ ಸೋಲು ಅನುಭವಿಸಿತು. ಇಂಗ್ಲೆಂಡ್‌ ಗೆಲುವಿನೊಂದಿಗೆ ಅದರ ಸೆಮಿಫೈನಲ್ ಹಾದಿ ಜೀವಂತವಾಯಿತು.
ಭಾರತ ಸೋಲಿನ ಬಳಿಕ ಪ್ರತಿಕ್ರಿಯಿಸಿದ ದಾದಾ, ಮೊದಲ 10 ಹಾಗೂ ಕೊನೆಯ 5 ಓವರ್‌ಗಳು  ಇಂಗ್ಲೆಂಡ್ ವಿರುದ್ಧ ಹಿನ್ನಡೆ ಅನುಭವಿಸಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ. ದೊಡ್ಡ ರನ್ ಗುರಿ ಮುಂದಿದ್ದಾಗಲೂ ಮೊದಲ 10 ಓವರ್‌ಗಳಲ್ಲಿ ರೋಹಿತ್ ಶರ್ಮಾ(102), ವಿರಾಟ್ ಕೊಹ್ಲಿ(66) ನಿಧಾನಗತಿಯ ರನ್ ಬಾರಿಸಿದ್ದು ಮತ್ತು ಪ್ರತಿ ಓವರ್‌ಗೆ 13 ರನ್‌ಗಳ ಅವಶ್ಯಕತೆಯಿದ್ದಾಗಲೂ ಕೊನೆಯ 5 ಓವರ್‌ಗಳಲ್ಲಿ ಎಂಎಸ್ ಧೋನಿ ಮತ್ತು ಕೇದಾರ್ ಜಾಧವ್ ಎಸೆತಗಳಿಗೆ ಒಂದೊಂದು ರನ್ ಮೊರೆ ಹೋಗಿದ್ದು ಭಾರತದ ಗೆಲುವಿಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

Related Stories

No stories found.

Advertisement

X
Kannada Prabha
www.kannadaprabha.com