ವಿಶ್ವ ಕಪ್ ಟೂರ್ನಿಯಿಂದ ವಿಜಯ್ ಶಂಕರ್ ಔಟ್, ಕನ್ನಡಿಗ ಮಾಯಾಂಕ್ ಅಗರವಾಲ್ ಆಯ್ಕೆ ಸಾಧ್ಯತೆ!

ತೀವ್ರ ವಿರೋಧದ ನಡುವೆಯೂ ವಿಶ್ವಕಪ್ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಕಳಪೆ ಪ್ರದರ್ಶನ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಟೂರ್ನಿಯಿಂದ ಹೊರಬಂದಿದ್ದು...

Published: 01st July 2019 12:00 PM  |   Last Updated: 01st July 2019 06:50 AM   |  A+A-


Vijay Shankar-Mayank Agarwal

ವಿಜಯ್ ಶಂಕರ್-ಮಾಯಾಂಕ್ ಅಗರವಾಲ್

Posted By : VS VS
Source : PTI
ಲಂಡನ್: ತೀವ್ರ ವಿರೋಧದ ನಡುವೆಯೂ ವಿಶ್ವಕಪ್ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಕಳಪೆ ಪ್ರದರ್ಶನ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಟೂರ್ನಿಯಿಂದ ಹೊರಬಂದಿದ್ದು ಕರ್ನಾಟಕದ ಬ್ಯಾಟ್ಸ್ ಮನ್ ಮಾಯಾಂಕ್ ಅಗರವಾಲ್ ಟೀಂ ಇಂಡಿಯಾವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

ಈ ಹಿಂದೆ ಅಭ್ಯಾಸ ಪಂದ್ಯದ ವೇಳೆ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ವಿಜಯ್ ಶಂಕರ್ ಗಾಯ ಮಾಡಿಕೊಂಡಿದ್ದರು. ಇದೀಗ ಮತ್ತೆ ಬುಮ್ರಾ ಎಸೆತದಲ್ಲಿ ಗಾಯಕೊಂಡಿದ್ದರಿಂದ ವಿಜಯ್ ಶಂಕರ್ ಅವರನ್ನು ಟೂರ್ನಿಯಿಂದ ಹೊರ ಬಂದಿದ್ದಾರೆ.

ನಿನ್ನೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಶಂಕರ್ ಬದಲಿಗೆ ರಿಷಬ್ ಪಂತ್ ರನ್ನು ಆಡಿಸಲಾಗಿತ್ತು. ಇದೀಗ ಅವರು ಗಾಯಗೊಂಡಿರುವುದರಿಂದ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

ಕರ್ನಾಟಕ ತಂಡದ ಆಟಗಾರ ಮಾಯಾಂಕ್ ಅಗರವಾಲ್ 2018ರ ಡಿಸೆಂಬರ್ 26ರಂದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ ತಂಡವನ್ನು ಸೇರಿಕೊಂಡಿದ್ದರು. 
Stay up to date on all the latest ಕ್ರಿಕೆಟ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp