ಇಂಗ್ಲೆಂಡ್ ವಿರುದ್ಧದ ಸೋಲಿಗೆ ಬ್ಯಾಟಿಂಗ್ ತಂತ್ರಗಳನ್ನು ದೂಷಿಸಿದ ವಿರಾಟ್ ಕೊಹ್ಲಿ

ಪಿಚ್ ಗೆ ತಕ್ಕಂತೆ ಬ್ಯಾಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳದಿದ್ದರಿಂದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 31 ರನ್ ಗಳನ್ನು ಚೇಸಿಂಗ್ ಮಾಡುವಲ್ಲಿ ವಿಫಲವಾಗಿದ್ದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಬರ್ಮಿಂಗ್ ಹ್ಯಾಮ್ : ಪಿಚ್ ಗೆ ತಕ್ಕಂತೆ ಬ್ಯಾಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳದಿದ್ದರಿಂದ  ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 31 ರನ್ ಗಳನ್ನು ಚೇಸಿಂಗ್ ಮಾಡುವಲ್ಲಿ ವಿಫಲವಾಗಿದ್ದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಮ್ಮ ಬ್ಯಾಟಿಂಗ್ ಸರಿಯಾಗಿ ಇರಲಿಲ್ಲ.ಬ್ಯಾಟಿಂಗ್ ನಲ್ಲಿ ಮತ್ತಷ್ಟು ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿತ್ತು. ಸಮೀಪಕ್ಕೆ ಹೋದೆವು, ಆದರೆ, ಇಂಗ್ಲೆಂಡ್ ಬೌಲಿಂಗ್ ಸೂಪರ್ ಆಗಿತ್ತು ಎಂದು ಪಂದ್ಯದ ಬಳಿಕ ಹೇಳಿದ ವಿರಾಟ್ ಕೊಹ್ಲಿ, ಒಂದು ವೇಳೆ  ಬ್ಯಾಟಿಂಗ್ ಸೂಕ್ತವಾಗಿದ್ದರೆ ಫಲಿತಾಂಶ ಬೇರೆಯಾಗಿರುತಿತ್ತು ಎಂದರು.
ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದ ಸಂದರ್ಭದಲ್ಲಿ ಟಾರ್ಗೆಟ್  ಮುಟ್ಟಲು ಅವಕಾಶವಿತ್ತು. ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್ ನಲ್ಲಿ ಆತಂಕ ಉಂಟಾಗಿತ್ತು. ಆ ವಿಕೆಟ್ ಬಿದ್ದ ನಂತರ ಬೃಹತ್ ಗುರಿ ಬೆನ್ನತ್ತಲು ಸಾಧ್ಯವಾಗಲಿಲ್ಲ ಎಂದು ಕೊಹ್ಲಿ ನುಡಿದರು.
ಧೋನಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಬೌಂಡರಿ ಬಾರಿಸಲು ಧೋನಿ ಯತ್ನಿಸುತ್ತಿದ್ದರು. ಆದರೆ. ಆದು ಸಾಧ್ಯವಾಗುತ್ತಿರಲಿಲ್ಲ. ಇಂಗ್ಲೆಂಡ್  ಬೌಲಿಂಗ್ ಉತ್ತಮವಾಗಿತ್ತು. ಮುಂದಿನ ಪಂದ್ಯದಲ್ಲಿ ಅನುಸರಿಸಬೇಕಾದ ತಂತ್ರಗಳ ಕುರಿತಂತೆ ಕೂತು ಚರ್ಚಿಸಲಾಗುವುದು ಎಂದು ವಿರಾಟ್ ಕೊಹ್ಲಿ ಹೇಳಿದರು.
ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ 76 ಎಸೆತಗಳಲ್ಲಿ 66 ರನ್ ಗಳಿಸಿ ಔಟಾಗಿದ್ದರು. ಭಾರತ ಏಳು ಪಂದ್ಯಗಳಿಂದ 11 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಲು ಈಗಲೂ ಉತ್ತಮ ಅವಕಾಶವನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com