ಮೂರನೇ ಬಾರಿಗೆ ತಂದೆಯಾದ ಕ್ರಿಕೆಟಿಗ ಡೇವಿಡ್ ವಾರ್ನರ್

ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮೂರನೇ ಬಾರಿ ತಂದೆಯಾಗಿದ್ದಾರೆ. ವಾರ್ನರ್‌ ದಂಪತಿಗೆ ಮೂರನೇ ಬಾರಿಯೂ ಹೆಣ್ಣು ಮಗು ...

Published: 02nd July 2019 12:00 PM  |   Last Updated: 02nd July 2019 12:28 PM   |  A+A-


David Warner Family

ಡೇವಿಡ್ ವಾರ್ನರ್ ಕುಟುಂಬ

Posted By : SD SD
Source : PTI
ಲಂಡನ್: ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮೂರನೇ ಬಾರಿ ತಂದೆಯಾಗಿದ್ದಾರೆ. ವಾರ್ನರ್‌ ದಂಪತಿಗೆ ಮೂರನೇ ಬಾರಿಯೂ ಹೆಣ್ಣು ಮಗು ಜನನವಾಗಿದೆ.

"ಕಳೆದ ರಾತ್ರಿ 10.30ರ ಸುಮಾರಿಗೆ ನಮ್ಮ ಕುಟುಂಬಕ್ಕೆ ನೂತನ ಸದಸ್ಯೆ ಇಸ್ಲಾ ರೋಸ್‌ ಆಗಮನವಾಗಿದೆ. ಕ್ಯಾಂಡಿಸ್‌ ವಾರ್ನರ್‌ ನಿಜಕ್ಕೂ ಅದ್ಭುತ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ. ಇಬ್ಬರು ಅಕ್ಕಂದಿರ ಸಂಭ್ರಮವಂತೂ ಮುಗಿಲು ಮುಟ್ಟಿದೆ,'' ಎಂದು ಡೇವಿಡ್‌ ವಾರ್ನರ್‌ ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ತನ್ನ ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭರ್ಜರಿ ಜಯ ದಾಖಲಿಸಿ ಒಂದು ವಾರ ಕಾಲ ವಿಶ್ರಾಂತಿಯಲ್ಲಿದ್ದು, ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ. 

ಇನ್ನು ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪತಿ ಡೇವಿಡ್‌ ವಾರ್ನರ್‌ಗೆ ಯಾವುದೇ ರೀತಿಯ ಆತಂಕ ಎದುರಾಗಬಾರದೆಂದು ಪತ್ನಿ ಕ್ಯಾಂಡಿಸ್‌ ವಾರ್ನರ್‌ ಲಂಡನ್‌ನಲ್ಲೇ ತಮ್ ಮೂರನೇ ಪುತ್ರಿಗೆ ಜನ್ಮ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದಿಂದ ಲಂಡನ್‌ಗೆ ಆಗಮಿಸಿದ್ದರು.
Stay up to date on all the latest ಕ್ರಿಕೆಟ್ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp