ಸಾಧಕರಿಗೆ ಗೌರವ ನೀಡುವುದನ್ನು ಕಲಿಯಿರಿ: ಸಂಜಯ್ ಮಂಜ್ರೇಕರ್ ಗೆ ಜಡೇಜಾ ಖಡಕ್ ತಿರುಗೇಟು

ನಾನು ಜಡೇಜಾ ರಂತಹ ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಖಡಕ್ ತಿರುಗೇಟು ನೀಡಿದ್ದಾರೆ.

Published: 03rd July 2019 12:00 PM  |   Last Updated: 03rd July 2019 09:47 AM   |  A+A-


Learn to respect people: Ravindra Jadeja hits back to Sanjay Manjrekar

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ನಾನು ಜಡೇಜಾ ರಂತಹ ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಖಡಕ್ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸಂಜಯ್ ಮಂಜ್ರೇಕರ್, ನಾನು ರವೀಂದ್ರ ಜಡೇಜಾ ರಂತಹ ಸಣ್ಣ ಪುಟ್ಟ ಆಟಗಾರರ ಅಭಿಮಾನಿಯಲ್ಲ ಎಂದು ಹೇಳಿದ್ದರು. ಮಂಜ್ರೇಕರ್ ಅವರ ಈ ಹೇಳಿಕೆ ವ್ಯಾಪಕ ವೈರಲ್ ಆಗಿದ್ದು ಅಲ್ಲದೇ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರವೀಂದ್ರ ಜಡೇಜಾ ಕೂಡ ತಿರುಗೇಟು ನೀಡಿದ್ದು, ಗೌರವ ಕೊಟ್ಟು ಗೌರವ ಪಡೆಯುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಜಡೇಜಾ, ನೀವು ಭಾರತದ ಪರ ಆಡಿದ್ದ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯಗಳನ್ನು ನಾನು ಆಡಿದ್ದೇನೆ. ಈಗಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಮೊದಲು ಸಾಧಕರಿಗೆ ಗೌರವ ನೀಡುವುದನ್ನು ಕಲಿಯಿರಿ.. ನಿಮ್ಮ ಅನಗತ್ಯ ಮಾತುಗಳನ್ನು ಕೇಳಿ ಸಾಕಾಗಿದೆ ಎಂದು ಜಡೇಜಾ ಟ್ವೀಟ್ ಮಾಡಿದ್ದಾರೆ. 

ಇನ್ನು ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ 15 ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆಯಾದರೂ ಈ ವರೆಗೂ ಒಂದೇ ಒಂದು ಪಂದ್ಯದಲ್ಲೂ ಪೂರ್ಣ ಪ್ರಮಾಣದಲ್ಲಿ ತಂಡದಲ್ಲಿ ಕಣಕ್ಕಿಳಿದಿಲ್ಲ. ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದ ಜಡೇಜಾ ಜೇಸನ್ ರಾಯ್ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp