ಈ ತಂಡದ ವಿರುದ್ಧದ ಸೋಲು ನಾವು ಇಡೀ ಟೂರ್ನಿಯಿಂದಲೇ ಹೊರ ಬೀಳುವಂತೆ ಮಾಡಿತು: ಪಾಕ್ ನಾಯಕ ಸರ್ಫರಾಜ್

ಈ ಒಂದು ತಂಡದ ವಿರುದ್ಧದ ಸೋಲು ನಾವು ಇಡೀ ಟೂರ್ನಿಯಿಂದಲೇ ಹೊರ ಬೀಳುವಂತೆ ಮಾಡಿತು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.
ಲಂಡನ್: ಈ ಒಂದು ತಂಡದ ವಿರುದ್ಧದ ಸೋಲು ನಾವು ಇಡೀ ಟೂರ್ನಿಯಿಂದಲೇ ಹೊರ ಬೀಳುವಂತೆ ಮಾಡಿತು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂದು ನಡೆದ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ  ಬಾಂಗ್ಲಾದೇಶದ ವಿರುದ್ಧ 94 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಫರಾಜ್ ಅಹ್ಮದ್, 'ಇಡೀ ಟೂರ್ನಿಯಲ್ಲಿ ನಾವು ಉತ್ತಮ ತಂಡವಾಗಿದ್ದೆವು. ಆರಂಭದಿಂದಲೂ ಉತ್ತಮ ಕ್ರಿಕೆಟ್ ಆಡಿದ ನಮಗೆ ತಂಡದಲ್ಲಿ ಕೆಲ ಸಂಯೋಜನೆಗಳು ಕೈ ಕೊಟ್ಟವು. ಆದರೆ ತಂಡಕ್ಕೆ ಶಾಹೀನ್ ಶಾ ಮತ್ತು ಹ್ಯಾರಿಸ್ ಸೊಹೆಲ್ ಆಗಮನದ ಬಳಿಕ ತಂಡದ ಸಮತೋಲನ ಸರಿ ಹೋಯಿತು.
ಇಮಾನ್, ಬಾಬರ್, ಹ್ಯಾರಿಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಬೌಲರ್ ಗಳೂ ಕೂಡ ಉತ್ತಮ ಪ್ರದರ್ಶನ ನೀಡಿದರು. ಕಳೆದ ನಾಲ್ಕು ಪಂದ್ಯಗಳಲ್ಲಿ ಉದಯೋನ್ಮುಖ ಪ್ರತಿಭೆ ಶಾಹೀನ್ ಅಫ್ರಿದಿ ಸಾಮರ್ಥ್ಯ ಜಗತ್ತಿಗೆ ಪರಿಚಯವಾಯಿತು ಎಂದು ಹೇಳಿದರು.
ಒಂದು ಸೋಲು ನಮ್ಮ ಲೆಕ್ಕಾಚಾರವನ್ನೇ ಉಲ್ಟಾ ಮಾಡಿತು
ಇದೇ ವೇಳೆ ತಂಡ ಟೂರ್ನಿಯಿಂದ ಹೊರಗೆ ಬಿದ್ದ ಕುರಿತು ಮಾತನಾಡಿದ ಸರ್ಫರಾಜ್, ಟೂರ್ನಿಯ ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ತಂಡದ ಎಲ್ಲ ರೀತಿಯ ಸಂಯೋಜನೆಗಳು ಉತ್ತಮ ಫಲಿತಾಂಶ ನೀಡಿತು. ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಕೂಡ ಇದ್ದೆವು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಒಂದೇ ಒಂದು ಸೋಲು ನಮ್ಮ ಇಡೀ ತಂಡವನ್ನು ಟೂರ್ನಿಯಿಂದ ಹೊರಬೀಳುವಂತೆ ಮಾಡಿತು.  ಆ ಒಂದು ಸೋಲು ನಮಗೆ ಟೂರ್ನಿಯಲ್ಲಿ ದುಬಾರಿಯಾಗಿ ಪರಿಣಮಿಸಿತು ಎಂದು ಸರ್ಫರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com