ಶ್ರೀಲಂಕಾ-ಭಾರತ ಪಂದ್ಯ: ರೋಹಿತ್ ಶತಕ ದಾಖಲಿಸಿದರೆ ಬರೊಬ್ಬರಿ 3 ವಿಶ್ವದಾಖಲೆಗಳು ಛಿದ್ರ!

ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ.
ಶ್ರೀಲಂಕಾ-ಭಾರತ ಪಂದ್ಯ: ರೋಹಿತ್ ಶತಕ ದಾಖಲಿಸಿದರೆ  ಬರೊಬ್ಬರಿ 3 ವಿಶ್ವದಾಖಲೆಗಳು ಛಿದ್ರ!
ಶ್ರೀಲಂಕಾ-ಭಾರತ ಪಂದ್ಯ: ರೋಹಿತ್ ಶತಕ ದಾಖಲಿಸಿದರೆ ಬರೊಬ್ಬರಿ 3 ವಿಶ್ವದಾಖಲೆಗಳು ಛಿದ್ರ!
ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. ಈಗ ಶ್ರೀಲಂಕಾ-ಭಾರತ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬೃಹತ್ ಮೊತ್ತ ದಾಖಲಿಸಿದ್ದೇ ಆದಲ್ಲಿ ಬರೊಬ್ಬರಿ 3 ವಿಶ್ವದಾಖಲೆಗಳನ್ನು ಛಿದ್ರ ಮಾಡಲಿದ್ದಾರೆ. 
7 ಇನ್ನಿಂಗ್ಸ್ ನಲ್ಲಿ 4 ಶತಕ ದಾಖಲಿಸಿರುವ ರೋಹಿತ್ ಶರ್ಮಾ ಒಟ್ಟಾರೆ 544 ರನ್ ಗಳನ್ನು ದಾಖಲಿಸಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳನ್ನು ಗಳಿಸಿದ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ. 
ಇಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮ ಅವರು ಶತಕ ದಾಖಲಿಸಿದರೆ ನಿರ್ಮಾಣವಾಗಲಿರುವ ಹೊಸ ದಾಖಲೆಗಳಾವುದು ಇಲ್ಲಿದೆ ಮಾಹಿತಿ
  1. ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ನಾಯಕ ಕುಮಾರ್ ಸಂಗಕ್ಕರ ಅತಿ ಹೆಚ್ಚು ಶತಕಗಳನ್ನು ಗಳಿಸಿರುವ  ದಾಖಲೆಯನ್ನು  ಹೊಂದಿದ್ದು, ರೋಹಿತ್ ಶರ್ಮಾ ಈ ದಾಖಲೆಯ ಸಮನಾದ ಶತಕಗಳನ್ನು ದಾಖಲಿಸಿದ್ದಾರೆ. ಶ್ರೀ ಲಂಕಾ ವಿರುದ್ಧ ರೋಹಿತ್ ಶರ್ಮಾ ಮತ್ತೊಂದು ಶತಕ ದಾಖಲಿಸಿದರೆ 2015 ರ ವಿಶ್ವಕಪ್ ನಲ್ಲಿ 4 ಶತಕಗಳನ್ನು ಗಳಿಸಿದ್ದ ಸಂಗಕ್ಕರ ಅವರ ದಾಖಲೆ ಬದಿಗೆ ಸರಿಯಲಿದೆ. 
  2. ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಈಗ ರೋಹಿತ್ ಶರ್ಮಾ 3 ನೇ ಸ್ಥಾನದಲ್ಲಿದ್ದಾರೆ.  ರೋಹಿತ್ ಶರ್ಮಾ 544 ರನ್ ಗಳಿಸಿದ್ದರೆ, 2007 ರಲ್ಲಿ ಮ್ಯಾಥ್ಯೂ ಹೇಡನ್ 580 ರನ್, ಸಚಿನ್ 2003 ರಲ್ಲಿ ತೆಂಡೂಲ್ಕರ್ 586 ರನ್ ಗಳಿಸಿದ್ದರು. ಸಚಿನ್ ದಾಖಲೆ ಛಿದ್ರ ಮಾಡಲು ರೋಹಿತ್ ಗೆ ಬೇಕಾದಿರುವುದು ಕೇವಲ 42 ರನ್ ಗಳಷ್ಟೇ. 
  3. ವಿಶ್ವಕಪ್ ನ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ 5 ನೇ ಸ್ಥಾನದಲ್ಲಿದ್ದಾರೆ. 2003 ರಲ್ಲಿ ಸಚಿನ್ ಗಳಿಸಿದ್ದ 673 ರನ್ ಗಳನ್ನು ಸರಿಗಟ್ಟುವುದಕ್ಕೆ ರೋಹಿತ್ ಗೆ ಬೇಕಿರುವುದು ಇನ್ನು 129 ರನ್ ಗಳಷ್ಟೇ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com