ಇಷ್ಟು ಬೇಗ ಧೋನಿ ನಿವೃತ್ತರಾಗಬೇಕಾ?: ಲಂಕಾ ಆಟಗಾರ ಮಲಿಂಗ ಹೇಳಿದ್ದೇನು?

ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು....

Published: 06th July 2019 12:00 PM  |   Last Updated: 06th July 2019 03:10 AM   |  A+A-


MS Dhoni should continue playing for another 1 or 2 years: Lasith Malinga

ಇಷ್ಟು ಬೇಗ ಧೋನಿ ನಿವೃತ್ತರಾಗಬೇಕಾ?: ಲಂಕಾ ಆಟಗಾರ ಮಲಿಂಗ ಹೇಳಿದ್ದೇನು?

Posted By : SBV SBV
Source : UNI
ಲಂಡನ್: ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಇನ್ನೂ ಎರಡು ವರ್ಷಗಳ ಕಾಲ ತಂಡದಲ್ಲಿ ಆಡಬೇಕು. ಆ ಮೂಲಕ ಯುವ ಆಟಗಾರರಿಗೆ ತಮ್ಮ ಕೌಶಲವನ್ನು ಹೇಳಿಕೊಡಬೇಕು ಎಂದು ಶ್ರೀಲಂಕಾ ತಂಡದ ಹಿರಿಯ ವೇಗಿ ಲಸಿತ್‌ ಮಲಿಂಗಾ ಹೇಳೀದ್ದಾರೆ.

ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಭಾರತ ತಂಡದ ಮಾಜಿ ನಾಯಕ  ಧೋನಿ ಪರದಾಡುತ್ತಿದ್ದಾರೆ. ತನಗಿರುವ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿ ಬಗ್ಗೆ ಕ್ರಿಕೆಟ್  ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 

ಆದರೆ ಅನುಭವಿ ಬೌಲರ್ ಮಾಲಿಂಗ, ಎಂಎಸ್ ಧೋನಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಕೂಲ್  ಕ್ಯಾಪ್ಟನ್ ಇನ್ನೊಂದು ಅಥವಾ ಎರಡು ವರ್ಷ ಕ್ರಿಕೆಟ್‌ ಆಡಬೇಕು. ಆ ಮೂಲಕ  ಮುಂಬರಲಿರುವ ಯುವ ಆಟಗಾರರಿಗೆ ತನ್ನ ವೃತ್ತಿ ಬದುಕಿನ ಅನುಭವಗಳನ್ನು ಧಾರೆಯೆರೆಯಬೇಕು  ಎಂದಿದ್ದಾರೆ.
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp