ನಿನ್ನೆ ಇಂಗ್ಲೆಂಡ್ ನ ಲೀಡ್ಸ್ ನಲ್ಲಿ ಶ್ರೀಲಂಕಾ ಮತ್ತು ಭಾರತ ನಡುವಿನ ಅಂತಿಮ ಲೀಗ್ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ನಟಿ ಅನುಷ್ಕಾ ಶರ್ಮಾ, ತಮ್ಮ ಗೆಳೆಯನನ್ನು 'ಬೌಂಡರಿ ಸಿಗ್ನಲ್ ಹೇಗೆ ತೋರಿಸುತ್ತಾರೆ' ಎಂದು ಕೇಳಿದ್ದಾರೆ. ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎಂದೇ ಹೇಳಲಾಗುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪತ್ನಿಗೆ ಬೌಂಡರಿ ಸಿಗ್ನಲ್ ತಿಳಿದಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.