ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್‌ ಶರ್ಮಾರನ್ನು ನೋಡಿ ನಮ್ಮ ಆಟಗಾರರು ಕಲಿಯಬೇಕು: ಕರುಣರತ್ನೆ

ಟೀಂ ಇಂಡಿಯಾದ ಉಪ ನಾಯಕ ರೋಹಿತ್‌ ಶರ್ಮಾ ಅವರಿಂದ ಶ್ರೀಲಂಕಾ ಆಟಗಾರರು ಕಲಿಯಬೇಕು ಎಂದು ಲಂಕಾ ನಾಯಕ ದಿಮುತ್‌ ಕರುಣರತ್ನೆ ಕರೆ ನೀಡಿದ್ದಾರೆ.
ರೋಹಿತ್ ಶರ್ಮಾ-ಕರುಣರತ್ನೆ
ರೋಹಿತ್ ಶರ್ಮಾ-ಕರುಣರತ್ನೆ
ಲೀಡ್ಸ್‌: ಟೀಂ ಇಂಡಿಯಾದ ಉಪ ನಾಯಕ ರೋಹಿತ್‌ ಶರ್ಮಾ ಅವರಿಂದ ಶ್ರೀಲಂಕಾ ಆಟಗಾರರು ಕಲಿಯಬೇಕು ಎಂದು ಲಂಕಾ ನಾಯಕ ದಿಮುತ್‌ ಕರುಣರತ್ನೆ ಕರೆ ನೀಡಿದ್ದಾರೆ. 
ಶನಿವಾರ ಐಸಿಸಿ ವಿಶ್ವಕಪ್‌ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಏಳು ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಅವರು, "ಪ್ರತಿಬಾರಿಯೂ ರೋಹಿತ್‌ ಶರ್ಮಾ ಉತ್ತಮ ರನ್‌ ಗಳಿಸುವ ಮೂಲಕ ಉತ್ತಮ ಆರಂಭ ಪಡೆಯುತ್ತಾರೆ. ಆ ರೀತಿ ನಮ್ಮ ಆಟಗಾರರು ಆಗಬೇಕು. ಅವರೊಬ್ಬ ಭಯವಿಲ್ಲದ ಆಟಗಾರ. ಶತಕ ಗಳಿಸುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಒಮ್ಮೆ ಅವರು ಜವಾಬ್ದಾರಿ ತೆಗೆದುಕೊಂಡರೆ ಯಾವ ಬೌಲರ್‌ಗೆ ಗೌರವ ನೀಡಬೇಕೆಂಬುದನ್ನು ಅರಿತು ಅತ್ಯುತ್ತಮ ಬ್ಯಾಟಿಂಗ್‌ ಮಾಡುತ್ತಾರೆ ಎಂದರು.
ಕೆಲವು ಸಂಗತಿಗಳಲ್ಲಿ ಅವರು ಮಾಸ್ಟರ್‌ ಕ್ಲಾಸ್‌. ಬ್ಯಾಟಿಂಗ್‌ ಮುಂದುವರಿಸುತ್ತಲೇ ಇರಬೇಕು. ಇವರ ಆಟವನ್ನು ನಮ್ಮ ಯುವ ಆಟಗಾರರು ಅನುಕರಣೆ ಮಾಡಬೇಕು" ಎಂದು ಹೇಳಿದರು. ಅವರ(ರೋಹಿತ್‌) ಬ್ಯಾಟಿಂಗ್‌ ವೀಕ್ಷಿಸಲು ಮಾದರಿ ಬ್ಯಾಟ್ಸ್‌ಮನ್‌ ರೀತಿ ಕಾಣುತ್ತಾರೆ. ಅವರಿಂದ ನಮ್ಮ ಆಟಗಾರರು ಕಲಿಯಬೇಕು. ಪಂದ್ಯದಲ್ಲಿ ಅವರಿಗೆ ರನ್‌ ಹಸಿವು ಹೆಚ್ಚಾಗಿ ಕಂಡುಬರುತ್ತದೆ. ಇದು ಯುವ ಆಟಗಾರರಿಗೆ ಮಾದರಿಯಾಗಬೇಕು" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com