ರೋ'ಹಿಟ್' ಶರ್ಮಾ ಕೇವಲ 27 ರನ್ ಬಾರಿಸಿದರೆ ವಿಶ್ವಕಪ್ ಇತಿಹಾಸದಲ್ಲೇ ಸರ್ವಶ್ರೇಷ್ಠ ದಾಖಲೆ ಧೂಳಿಪಟ!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಖ್ಯಾತಿಗೆ ಭಾಜನರಾಗಿದ್ದು ಇನ್ನು ಕೇವಲ 27 ರನ್ ಬಾರಿಸಿದರೆ...
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಖ್ಯಾತಿಗೆ ಭಾಜನರಾಗಿದ್ದು ಇನ್ನು ಕೇವಲ 27 ರನ್ ಬಾರಿಸಿದರೆ ವಿಶ್ವಕಪ್ ಟೂರ್ನಿಯಲ್ಲೇ ಸರ್ವಶ್ರೇಷ್ಠ ದಾಖಲೆ ಸೇರಿ ಇನ್ನು ಎರಡು ದಾಖಲೆಗಳು ಧೂಳಿಪಟವಾಗಲಿದೆ.
ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 8 ಪಂದ್ಯಗಳ ಪೈಕಿ 647 ರನ್ ಬಾರಿಸಿದ್ದಾರೆ. ಇನ್ನು 27 ರನ್ ಬಾರಿಸಿದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸಚಿನ್ 2003ರ ವಿಶ್ವಕಪ್ ಟೂರ್ನಿಯಲ್ಲಿ 11 ಪಂದ್ಯಗಳ ಪೈಕಿ 673 ರನ್ ಬಾರಿಸಿದ್ದರು. ಇನ್ನು 2007ರಲ್ಲಿ ಮ್ಯಾಥ್ಯೂವ್ ಹೇಡನ್ 11 ಪಂದ್ಯ ಪೈಕಿ 659 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರು ದಿಗ್ಗಜರ ದಾಖಲೆಯನ್ನು ಹಿಂದಿಕ್ಕುವ ಹಾದಿಯಲ್ಲಿ ರೋಹಿತ್ ಶರ್ಮಾ ಇದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ನಾಳಿನ ಪಂದ್ಯದಲ್ಲಿ ರೋಹಿತ್ ಶರ್ಮಾ 53 ರನ್ ಬಾರಿಸಿದರೆ ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಬಾರಿಸಿದ ವಿಶ್ವದ ಮೊದಲ ಆಟಗಾರನಾಗಲಿದ್ದಾರೆ. 
ಇನ್ನು ರೋಹಿತ್ ಶರ್ಮಾ ಮುಂದಿನ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿದರೆ ವಿಶ್ವಕಪ್ ಟೂರ್ನಿಯಲ್ಲಿ 6 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸಚಿನ್ 6 ವಿಶ್ವಕಪ್ ನಲ್ಲಿ 6 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ ಟೂರ್ನಿಯಲ್ಲೇ 5 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com