ಭಾರತ-ನ್ಯೂಜಿಲ್ಯಾಂಡ್ ಸೆಮಿ ಪಂದ್ಯಕ್ಕೆ ಡಿಎಸ್ಎಲ್ ನಿಯಮ ಬೇಡ: ಟೀಂ ಇಂಡಿಯಾ ಅಭಿಮಾನಿಗಳು ಕಂಗಾಲಾಗಿದ್ದೇಕೆ?

ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದ ಅರ್ಧಕ್ಕೆ ನಿಂತಿದ್ದು ಇಂದು ಮುಂದುವರೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದ ಅರ್ಧಕ್ಕೆ ನಿಂತಿದ್ದು ಇಂದು ಮುಂದುವರೆಯಲಿದೆ. ಈ ಮಧ್ಯೆ ಇಂದಿನ ಪಂದ್ಯಕ್ಕೆ ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸುವುದು ಬೇಡ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪರಿತಪಿಸುತ್ತಿದ್ದಾರೆ.
ನಿನ್ನೆ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ನ್ಯೂಜಿಲ್ಯಾಂಡ್ 46.1 ಓವರ್ ಗೆ 5 ವಿಕೆಟ್ ನಷ್ಟಕ್ಕೆ 211 ರನ್ ಮಾತ್ರ ಕಲೆ ಹಾಕಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಇವತ್ತಿಗೆ ಮುಂದೂಡಲಾಯಿತು. 
ಆದರೆ ನಿನ್ನೆ ಮಳೆ ಬಂದು ನಿಂತ ನಂತರ ಡಕ್ವರ್ತ್ ಲೂಯಿಸ್ ನಿಯಮ ಅನ್ವಯ ಮಾಡುವ ಬಗ್ಗೆ ಪಂದ್ಯದ ರೆಫರಿ ನಿರ್ಧರಿಸಿದ್ದರು. ಆದರೆ ಮತ್ತೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿತ್ತು. 
ಡಿಎಲ್ಎಸ್ ನಿಯಮದ ಪ್ರಕಾರ ನ್ಯೂಜಿಲ್ಯಾಂಡ್ ತಂಡದ ಮೊತ್ತ, ರನ್ ರೇಟ್ ಮತ್ತು ಭಾರತದ ಓವರ್ ಗಳನ್ನು ಪರಿಗಣನೆಗೆ ತೆಗೆದು ನಿರ್ದಿಷ್ಟ ಗುರಿಯನ್ನು ಭಾರತಕ್ಕೆ ನೀಡಲಾಗುತ್ತಿತ್ತು. 
ಅದರಂತೆ 46 ಓವರ್ ಪಂದ್ಯ ನಡೆಸಿದರೆ 237 ರನ್ ಗುರಿ, 40 ಓವರ್ ಗೆ ಸೀಮಿತ ಮಾಡಿದರೆ 223 ರನ್ ಗುರಿ ಅಥವಾ 35 ಓವರ್ ಗಳಿಗೆ ಅಂತಿಮಗೊಳಿಸಿದ್ದರೆ 209 ರನ್ ಗುರಿ ನೀಡುವ ಸಾಧ್ಯತೆ ಇತ್ತು. ಅದು ಸಾಧ್ಯವಾಗದಿದ್ದರೆ ಕೊನೆಯ 20 ಓವರ್ ಗಳಲ್ಲಿ ಭಾರತಕ್ಕೆ 148 ರನ್ ಗುರಿ ನೀಡುವ ನಿರ್ಧಾರ ಮಾಡಲಾಗಿತ್ತು. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. 
ಭಾರತ ಬೌಲರ್ ಗಳು ಸಾಂಘಿಕ ಹೋರಾಟ ನಡೆಸಿ ನ್ಯೂಜಿಲ್ಯಾಂಡ್ ಆಟಗಾರರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದಾರೆ. ಹೀಗಿರುವಾಗ ಕಡಿಮೆ ಎಸೆತದಲ್ಲಿ ಜಾಸ್ತಿ ರನ್ ಯಾಕೆ ಹೊಡೆಯಬೇಕು ಎಂದು ಟ್ವೀಟರಿಗರು ಆಕ್ರೋಶ ಹೊರಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com