ಸಂಜಯ್ ಮಂಜ್ರೇಕರ್... ನನ್ನನ್ನು ಟ್ವಿಟರ್ ನಲ್ಲಿ ಅನ್ ಬ್ಲಾಕ್ ಮಾಡಿ: ಇಂಗ್ಲೆಂಡ್ ಮಾಜಿ ನಾಯಕ ವಾನ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಹಾಗೂ ಸಂಜಯ್ ಮಂಜ್ರೇಕರ್ ಇಬ್ಬರೂ ಪರಸ್ಪರ ವಾಗ್ವಾದ ನಡೆಸಿಕೊಂಡು ಸುದ್ದಿಯಾಗಿದ್ದರು. ಈಗ ಇದೇ ವಿಷಯಕ್ಕೆ ಇಬ್ಬರೂ ಮತ್ತೆ ಸುದ್ದಿಯಲ್ಲಿದ್ದಾರೆ.

ರವೀಂದ್ರ ಜಡೇಜಾ ಅವರನ್ನು ಮೈಕಲ್ ವಾನ್ ಕ್ಷಣಿಕ ಆಟಗಾರ ಎಂಬ ಅರ್ಥದಲ್ಲಿ ವರ್ಣಿಸಿದ್ದ ಹಿನ್ನೆಲೆಯಲ್ಲಿ ಸಂಜಯ್ ಮಂಜ್ರೇಕರ್ ವಾನ್ ವಿರುದ್ಧ ಅಸಮಾಧಾನಗೊಂಡು ವಾಗ್ವಾದಕ್ಕೆ ಇಳಿದಿದ್ದರು. ಈ ಬೆನ್ನಲ್ಲೇ ಸಂಜಯ್ ಮಂಜ್ರೇಕರ್ ಟ್ವಿಟರ್ ನಲ್ಲಿ ವಾಘನ್ ಅವರನ್ನು ಬ್ಲಾಕ್ ಮಾಡಿದ್ದರು. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿರುವ ವಾನ್, ತಮ್ಮನ್ನು ಟ್ವಿಟರ್ ನಲ್ಲಿ ಅನ್ ಬ್ಲಾಕ್ ಮಾಡುವಂತೆ ಮಂಜ್ರೇಕರ್ ಗೆ ಮನವಿ ಮಾಡಿದ್ದಾರೆ, 
ಲಂಕಾ-ಭಾರತದ ಪಂದ್ಯದಲ್ಲಿ ಯಜುವೇಂದ್ರ ಚಹಾಲ್ ಬೌಂಡರಿಯಲ್ಲಿ ಕುಳಿತಿರುವ ಫೋಟೋ ವೈರಲ್ ಆಗಿತ್ತು. ಇದೇ ಫೋಟೊಗೆ ಮಂಜ್ರೇಕರ್ ಫೋಟೋ ಮಾರ್ಫ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ವಾನ್ ಕಮ್ ಆನ್ ಸಂಜಯ್ ಅನ್ ಬ್ಲಾಕ್ ಮಿ ಆನ್ ಟ್ವಿಟರ್ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com