ಮಳೆಯಿಂದ ಅರ್ಧಕ್ಕೆ ನಿಂತ ಭಾರತ-ನ್ಯೂಜಿಲ್ಯಾಂಡ್ ಸೆಮಿ ಪಂದ್ಯ, ಭಾರತಕ್ಕಿದಿಯ ಡಬಲ್ ಧಮಾಕ?

ತೀವ್ರ ಕುತೂಹಲ ಮೂಡಿಸಿರುವ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿದ್ದು ಇಂದು ಪಂದ್ಯ ಮುಂದುವರೆಯಲಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
ಲಂಡನ್: ತೀವ್ರ ಕುತೂಹಲ ಮೂಡಿಸಿರುವ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿದ್ದು ಇಂದು ಪಂದ್ಯ ಮುಂದುವರೆಯಲಿದೆ. ಇಲ್ಲಿ ಒಂದು ಅಂಶವೆಂದರೆ ಪಂದ್ಯ ಮುಂದುವರೆದರೂ, ಮಳೆಯಿಂದ ಇಂದಿನ ಪಂದ್ಯ ರದ್ದಾದರೂ ಭಾರತಕ್ಕೆ ಇದೇ ಡಬಲ್ ಧಮಾಕ.
ಆದರೆ ಇಂದು ಸಹ ಮಳೆ ಬರುವ ಸೂಚನೆಗಳು ಹೆಚ್ಚಾಗಿರುವುದರಿಂದ ಫೈನಲ್ ಗೆ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿಸಿದೆ.
ವಿಶ್ವಕಪ್ ಟೂರ್ನಿ ರೋಚಕ ಘಟ್ಟಕ್ಕೆ ಬಂದು ತಲುಪಿದ್ದು ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆ ಪಡಿಸಿದ್ದರಿಂದ ಫೈನಲ್ ಗೆ ಭಾರತ ನೇರವಾಗಿ ತಲುಪಬಹುದೇ ಇಲ್ಲಿದೆ ಮಾಹಿತಿ.
ಸದ್ಯ ಪಂದ್ಯ ವರುಣನ ಅವಕೃಪೆಗೆ ಗುರಿಯಾಗಿದೆ. ಪಂದ್ಯ ರದ್ದಾಗುವಾಗ ನ್ಯೂಜಿಲ್ಯಾಂಡ್ 46.1 ಓವರ್ ವೇಳೆ 5 ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿದೆ. ಇಂದು ಪಂದ್ಯವನ್ನು ಅಲ್ಲಿಂದಲೆ ಮುಂದುವರೆಯುತ್ತೇ. ಇನ್ನು ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಅಲ್ಲಿಗೆ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಆದರೆ ಅಂಕಪಟ್ಟಿಯಲ್ಲಿ 15 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ ಫೈನಲ್ ಗೆ ನೇರವಾಗಿ ಪ್ರವೇಶ ಸಿಗುತ್ತದೆ. ಇನ್ನು 11 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಫೈನಲ್ ಗೇರುವ ಅವಕಾಶದಿಂದ ವಂಚಿತವಾಗುವ ಸಾಧ್ಯತೆ ಇದೆ.
ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ನಿರ್ದಿಷ್ಠ ದಾಳಿ ನಡೆಸಿ ನ್ಯೂಜಿಲ್ಯಾಂಡ್ ತಂಡವನ್ನು ಅಲ್ಪಮೊತಕ್ಕೆ ಕಟ್ಟಿ ಹಾಕಿರುವುದು ತಂಡಕ್ಕೆ ಪ್ರಯೋಜನವಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಂದ್ಯ ಆರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com