‘ಕ್ರೀಸ್’ ಕಚ್ಚಿ ನಿಲ್ಲದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ಸ್; ಇಂಗ್ಲೆಂಡ್‌ಗೆ 224 ರನ್ ಟಾರ್ಗೆಟ್

ಆತಿಥೇಯ ತಂಡದ ವೇಗದ ಬೌಲಿಂಗ್ ದಾಳಿಗೆ ಉತ್ತರಿಸುವಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿಫಲವಾಗಿದ್ದು ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ 224 ರನ್ ಗಳ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬರ್ನಿಂಗ್ ಹ್ಯಾಮ್: ಆತಿಥೇಯ ತಂಡದ ವೇಗದ ಬೌಲಿಂಗ್ ದಾಳಿಗೆ ಉತ್ತರಿಸುವಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿಫಲವಾಗಿದ್ದು ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ 224 ರನ್ ಗಳ ಗುರಿಯನ್ನು ಇಂಗ್ಲೆಂಡ್ ತಂಡಕ್ಕೆ ನೀಡಿದೆ. 
ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್ ಹಾಗೂ ಏರೋನ್ ಫಿಂಚ್ ಬಿಗ್ ಇನ್ನಿಂಗ್ಸ್ ಕಟ್ಟುವ ಲೆಕ್ಕಾಚಾರಕ್ಕೆ ವೇಗಿಗಳು ಬ್ರೇಕ್ ಹಾಕಿದರು. 
ಮಹತ್ವದ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದ ಪೀಟರ್ ಹ್ಯಾಂಡ್ಸ್ ಕಾಂಬ್ ನೆಲಕಚ್ಚಿ ನಿಂತು ಬ್ಯಾಟ್ ಮಾಡಲಿಲ್ಲ. ಇವರು ಕ್ರಿಸ್ ವೋಕ್ಸ್ ಎಸೆತದಲ್ಲಿ ಬೋಲ್ಡ್ ಆದರು. 
4ನೇ ವಿಕೆಟ್ ಗೆ ಅಲೆಕ್ಸ್ ಕರಿ ಹಾಗೂ ಸ್ಟೀವನ್ ಸ್ಮಿತ್ ಅವರು ತಂಡವನ್ನು ಅಪಾಯದಿಂದ ಪಾರು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಜೋಡಿ ಡ್ರೆಸ್ಸಿಂಗ್ ರೂಮ್ ನಲ್ಲಿ ಹೆಣೆದುಕೊಂಡಂತೆ ಇನ್ನಿಂಗ್ಸ್ ಕಟ್ಟುತ್ತಾ ಸಾಗಿತು. ವಿಕೆಟ್ ಕಾಯ್ದುಕೊಂಡು ರನ್ ಹಿವಗ್ಗಿಸುತ್ತಾ ಸಾಗಿದ ಜೋಡಿಗೆ ಬ್ರೇಕ್ ಹಾಕುವಲ್ಲಿ ಇಂಗ್ಲೆಂಡ್ ವಿಫಲವಾಯಿತು. 
ಸುಮಾರು 21 ಓವರ್ ಗಳ ಕಾಲ ನೆಲಕಚ್ಚಿ ಬ್ಯಾಟ್ ಮಾಡಿದ ಕರಿ ಹಾಗೂ ಸ್ಮಿತ್, ಮಾರ್ಗನ್ ಪಡೆಯ ಚಿಂತೆಯನ್ನು ಹೆಚ್ಚಿಸಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋಡಿ ತಂಡಕ್ಕೆ ಶತಕದ ಜೊತೆಯಾಟ ನೀಡಿತು. ಅಲ್ಲದೆ ತಂಡ ಮೊತ್ತವನ್ನು 100 ರನ್ ಗಳ ಗಡಿ ದಾಟಿಸಿತು. ಕರಿ 45 ರನ್ ಬಾರಿಸಿ ಔಟ್ ಆದರು. 
7ನೇ ವಿಕೆಟ್ ಗೆ ಸ್ಮಿತ್ ಹಾಗೂ ಮಿಚೆಲ್ ಸ್ಟಾರ್ಕ್ ಜೋಡಿ ಸಹ ರನ್ ಗಳನ್ನು ಕಲೆ ಹಾಕಿತು. ಈ ಜೋಡಿ 57 ಎಸೆತಗಳಲ್ಲಿ 51 ರನ್ ಬಾರಿಸಿ ತಂಡದ ಮೊತ್ತ 200 ರನ್ ಗಳ ಗಡಿ ದಾಟುವಂತೆ ಮಾಡಿತು. ಸ್ಮಿತ್ 85 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟಾದರು. 
ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಆಸ್ಟ್ರೇಲಿಯಾ 49 ಓವರ್ ಗಳಲ್ಲಿ 223 ರನ್ ಗಳಿಗೆ ಆಲೌಟ್ ಆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com