ವಿಶ್ವಕಪ್: ಹಾಲಿ ಚಾಂಪಿಯನ್ ಆಸಿಸ್ ಮಣಿಸಿದ ಇಂಗ್ಲೆಂಡ್ ಫೈನಲ್ ಗೆ

ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತುವ ಕನಸು ಹೊಂದಿರುವ ಆತಿಥೇಯ ಇಂಗ್ಲೆಂಡ್, ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಹಾಲಿ ಚಾಂಪಿಯನ್...
ಜೋಫ್ರಾ ಆರ್ಚರ್ - ಆದಿಲ್ ರಶೀದ್
ಜೋಫ್ರಾ ಆರ್ಚರ್ - ಆದಿಲ್ ರಶೀದ್
ಬರ್ಮಿಂಗ್ ಹ್ಯಾಮ್: ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತುವ ಕನಸು ಹೊಂದಿರುವ ಆತಿಥೇಯ ಇಂಗ್ಲೆಂಡ್, ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎಂಟು ವಿಕೆಟ್ ಗಳಿಂದ ಮಣಿಸಿ, 27 ವರ್ಷಗಳ ಬಳಿಕ ಆಂಗ್ಲರು ಫೈನಲ್ ಗೆ ಪ್ರವೇಶಿಸಿದ್ದಾರೆ.
ಸೆಮಿಫೈನಲ್ಸ್ ಪಂದ್ಯದಲ್ಲಿ ಭರ್ಜರಿ ಸಂಘಟಿತ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್ ಮೊದಲು ಬೌಲಿಂಗ್ ನಲ್ಲಿ ಫಿಂಚ್ ಪಡೆಯನ್ನು 49 ಓವರ್ ಗಳಲ್ಲಿ 223 ರನ್ ಗಳಿಗೆ ಕಟ್ಟಿ ಹಾಕಿತು. ಗುರಿಯನ್ನು ಹಿಂಬಾಲಿಸಿದಾಗ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ ಮೇಲ್ಪಂಕ್ತಿಯ ಆಟಗಾರರ ಜವಾಬ್ದಾರಿ ಆಟದ ನೆರವಿನಿಂದ 32.1 ಓವರ್ ನಲ್ಲಿ 2 ವಿಕೆಟ್ ಗೆ 226 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು.
ಇದರೊಂದಿಗೆ ಮೂರು ಬಾರಿಯ ರನ್ನರ್-ಅಪ್ ತಂಡವಾಗಿರುವ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. 
ಮೊದಲ ಸೆಮಿಫೈನಲ್ಸ್ ನಲ್ಲಿ ಭಾರತ ತಂಡವನ್ನು ಸೋಲಿಸಿದ್ದ ನ್ಯೂಜಿಲೆಂಡ್ ವಿರುದ್ಧ, ಭಾನುವಾರ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ಕಾದಾಟ ನಡೆಸಲಿದೆ.
ಈ ಹಿಂದೆ 1979, 1987 ಹಾಗೂ 1992ನೇ ವರ್ಷಗಳಲ್ಲಿ ಇಂಗ್ಲೆಂಡ್ ರನ್ನರ್-ಅಪ್ ಪ್ರಶಸ್ತಿ ಗೆದ್ದಿತ್ತು. ಅತ್ತ ಸತತ ಎರಡನೇ ಬಾರಿಗೆ ಫೈನಲ್ ಸಾಧನೆ ಮಾಡಿರುವ ನ್ಯೂಜಿಲೆಂಡ್ ಸಹ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದೆ. ಹಾಗಾಗಿ ಭಾನುವಾರ ರೋಚಕ ಹಣಾಹಣಿ ನಡೆಯಲಿರುವುದು ಗ್ಯಾರಂಟಿಯಾಗಿದೆ. 
ಇನ್ನೊಂದೆಡೆ ಎಂಟು ಬಾರಿ ಸೆಮಿಫೈನಲ್ ಪ್ರವೇಶಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com