ಧೋನಿ ಕಣ್ಣಲ್ಲಿ ಕಣ್ಣೀರು, ಸಮಾಧಾನಪಡಿಸಿದ ಅಭಿಮಾನಿಗಳು

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರನೌಟ್ ಬಳಿಕ ಅವರ ಕಣ್ಣಲ್ಲಿ ಕಣ್ಣೀರು ಕಾಣಿಸಿದೆ
ಎಂಎಸ್ ಧೋನಿ
ಎಂಎಸ್ ಧೋನಿ
ಲಂಡನ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರನೌಟ್ ಬಳಿಕ  ಅವರ ಕಣ್ಣಲ್ಲಿ ಕಣ್ಣೀರು ಕಾಣಿಸಿದೆ. ರನೌಟ್ ಆಗುತ್ತಿದ್ದಂತೆ ಅಳುತ್ತಾ ಧೋನಿ ಫೆವಿಲಿಯನ್ನತ್ತ ನಿರ್ಗಮಿಸಿದ್ದಾರೆ.  ಆದರೆ, ಅಭಿಮಾನಿಗಳು  ಟ್ವಿಟರ್ ಮೂಲಕ ಧೋನಿಯನ್ನು  ಸಮಾಧಾನಪಡಿಸಿದ್ದಾರೆ.
ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಧೋನಿ 50 ರನ್ ಗಳಿಸಿದರು. ಆದರೆ, ಕಿವೀಸ್ ಬಗ್ಗುಬಡಿದು ಟೀಂ ಇಂಡಿಯಾವನ್ನು ಫೈನಲ್  ಗೆ ಕರೆದೊಯ್ಯುವಲ್ಲಿ ವಿಫಲರಾದರು.  ರನೌಟ್ ಆಗುತ್ತಿದ್ದಂತೆ ಧೋನಿ ವಿಚಲಿತರಾದ್ದಂತೆ ಕಂಡುಬಂದರು. ಇದು ಅವರನ್ನು ಆರಾದಿಸುತ್ತಿದ್ದ ಅಭಿಮಾನಿಗಳಿಗೆ ಸರಿ ಎನ್ನಿಸಲಿಲ್ಲ.
ಆದರೂ,  50 ರನ್ ಗಳಿಸುವುದರ ಮೂಲಕ ಭಾರತದ  ಮಾರ್ಯಾದೆ ಕಾಪಾಡಿದ ಧೋನಿ ಪ್ರಯತ್ನಕ್ಕೆ ಟ್ವೀಟರ್ ನಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
ಆಳಬೇಡಿ ಲಿಜೆಂಡರ್, ಏಲ್ಲೆ ಇದ್ದರೂ ನಿಮ್ಮಗೆ ಬೆಂಬಲ ನೀಡುತ್ತೇವೆ. ಲವ್ ಯು ಧೋನಿ ಎಂದು ಅಭಿಮಾನಿಯೊಬ್ಬರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. 
'' ನಿಮ್ಮಗೆ ಕ್ರಿಕೆಟ್  ಒಂದು ಪಂದ್ಯವಷ್ಟೇ, ಆದರೆ, ನಮ್ಮಗೆ ನೀವೊಬ್ಬ ಆಟಗಾರ ಅಲ್ಲ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ ಲೆಜೆಂಡ್  ”ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಪಂದ್ಯ ಗೆಲ್ಲಲ್ಲಿ ಅಥವಾ ಬಿಡಲಿ ಧೋನಿಯನ್ನು ದೂಷಿಸುವುದು ಸರಿಯಲ್ಲ, ಆದರೆ, ಅತ್ಯಂತ ವಿನಮ್ರ ಹಾಗೂ ಕರುಣೆಯುಳ್ಳ ಧೋನಿ ದೇಶಕ್ಕಾಗಿ ಪ್ರೀತಿಯಿಂದ ಆಡುತ್ತಾರೆ. ಅವರೊಬ್ಬ ಉತ್ತಮ ಆಟಗಾರರು ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
'ನಿಮ್ಮ ಕಣ್ಣಲ್ಲಿ ನೀರು ಬಂದಿದ್ದಕ್ಕೆ ಕ್ಷಮೆ ಇರಲಿ. ಎಲ್ಲಾ 135 ಕೋಟಿ ಜನರು ನಿಮ್ಮ ನಾಯಕತ್ವವನ್ನು ಮಿಸ್ ಮಾಡಿಕೊಂಡಿದ್ದಾರೆ. ನೀವು ಯಾವಾಗಲೂ ಭಾರತೀಯರಿಗೆ ಸ್ಪೂರ್ತಿಯಾಗಿರುತ್ತೀರಿ, ಥ್ಯಾಂಕ್ ಯು ಮೈ ಡಿಯರ್ ಕೂಲ್ ಕ್ಯಾಪ್ಟನ್ ಎಂದು ಮತ್ತೊಬ್ಬ ಅಭಿಮಾನಿ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಧೋನಿ ನಿದಾನಗತಿಯ ಬ್ಯಾಟಿಂಗ್ ಬಗ್ಗೆ ಅನೇಕ ಮಾಜಿ ಕ್ರಿಕೆಟ್ ಆಟಗಾರರಿಂದ ಟೀಕೆಗಳು ವ್ಯಕ್ತವಾಗಿತ್ತು.ಈ ವಿಶ್ವಕಪ್  ಧೋನಿ ಅವರಿಗೆ ಕೊನೆಯದ್ದು ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ.
 ಕಿವೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ. ಕೆ.ಎಲ್ ರಾಹುಲ್ ಕೇವಲ 1 ರನ್ ಗಳಿಗೆ ಔಟಾಗಿದ್ದರು. ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕ ಮೂವರು ಬ್ಯಾಟ್ಸ್ ಮನ್ ಗಳಿಗೆ ಕೇವಲ 1 ರನ್ ಗಳಿಗೆ ಔಟಾದದ್ದು ಇದೇ ಪ್ರಥಮ ಎನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com