ರಿಷಬ್ ಪಂತ್ ಔಟ್ 'ಕರುಣಾಜನಕ' ಪೀಟರ್ಸನ್ ಹೇಳಿಕೆಗೆ ಯುವರಾಜ್ ಸಿಂಗ್ ಕೊಟ್ಟ ತಿರುಗೇಟು!

ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ 5 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಷಬ್ ಪಂತ್ ತಾಳ್ಮೆಯ...

Published: 11th July 2019 12:00 PM  |   Last Updated: 11th July 2019 04:34 AM   |  A+A-


Kevin Pietersen, Rishabh Pant, Yuvraj Singh

ಕೇವಿನ್ ಪೀಟರ್ಸನ್, ರಿಷಬ್ ಪಂತ್, ಯುವರಾಜ್ ಸಿಂಗ್

Posted By : VS VS
Source : Online Desk
ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ 5 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಷಬ್ ಪಂತ್ ತಾಳ್ಮೆಯ ಆಟವಾಡಿ ಕೊಂಚ ಚೇತರಿಕೆ ತಂದುಕೊಟ್ಟಿದ್ದರು. ಆದರೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ಕೊಟ್ಟು ಔಟಾಗಿದ್ದಕ್ಕೆ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಕಿಚಾಯಿಸಿದ್ದರು. 

ಟ್ವೀಟ್ ಮಾಡಿದ್ದ ಕೇವಿನ್ ಪೀಟರ್ಸನ್ ಅವರು ನಾವು ಎಷ್ಟು ಬಾರಿ ನೋಡಿದ್ದೇವೆ ರಿಷಬ್ ಪಂತ್ ಅದನ್ನು ಮಾಡಿದ್ದಾರೆ??!! ಅವರನ್ನು ಆರಂಭದಲ್ಲಿ ಆಯ್ಕೆ ಮಾಡದ ಕಾರಣ! ಕರುಣಾಜನಕ! ಎಂದು ಟ್ವೀಟಿಸಿದ್ದರು. 

ಇದಕ್ಕೆ ತಿರುಗೇಟು ನೀಡಿರುವ ಯುವರಾಜ್ ಸಿಂಗ್ ಅವರು ರಿಷಬ್ ಪಂತ್ 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ! ಕಲಿಯುವುದು ಮತ್ತು ಉತ್ತಮಗೊಳ್ಳುವುದು ಅವನ ತಪ್ಪಲ್ಲ, ಅದು ಕರುಣಾಜನಕವಲ್ಲ! ಆದಾಗ್ಯೂ ನಮ್ಮೆಲ್ಲರಿಗೂ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅರ್ಹರಾಗಿದ್ದೇವೆ ಎಂದು ಟ್ವೀಟಿಸಿದ್ದಾರೆ. 

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 239 ರನ್ ಪೇರಿಸಿದ್ದು 240 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 221 ರನ್ ಪೇರಿಸಿದ್ದು 18 ರನ್ ಗಳಿಂದ ಸೋಲು ಕಂಡಿತ್ತು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp