ನೋಬಾಲ್ ಗೆ ಧೋನಿ ಬಲಿ...! ಅಂಪೈರ್ ಎಡವಟ್ಟಿಗೆ ಅಭಿಮಾನಿಗಳ ಆಕ್ರೋಶ, ಆದರೆ ನಿಜ ಏನು ಗೊತ್ತಾ?

ಭಾರತದ ಪರ ಅರ್ಧಶತಕ ಸಿಡಿಸಿ ನಿರ್ಣಾಯಕ ಎನಿಸಿದ್ದ ಮಹೇಂದ್ರ ಸಿಂಗ್ ಧೋನಿ ರನೌಟ್... ಇಡೀ ಪಂದ್ಯದ ಗತಿಯನ್ನು ಬದಲಿಸಿತ್ತು. ಆದರೆ ಇದೇ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ 18 ರನ್ ಗಳ ಸೋಲು ಕಂಡಿತ್ತು. ಭಾರತದ ಪರ ಅರ್ಧಶತಕ ಸಿಡಿಸಿ ನಿರ್ಣಾಯಕ ಎನಿಸಿದ್ದ ಮಹೇಂದ್ರ ಸಿಂಗ್ ಧೋನಿ ರನೌಟ್... ಇಡೀ ಪಂದ್ಯದ ಗತಿಯನ್ನು ಬದಲಿಸಿತ್ತು. ಆದರೆ ಇದೇ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಹೌದು... ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಧೋನಿ ರನೌಟ್ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತ್ತು. ಆದರೆ ಈ ಹಂತದಲ್ಲಿ ಅಂಪೈರ್ ಗಳ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ. ನಿಯಮದ ಪ್ರಕಾರ ಅಂತಿಮ 10 ಓವರ್ ಗಳ ಬ್ಯಾಟಿಂಗ್​ ಪವರ್​ ಪ್ಲೇನಲ್ಲಿ 30 ಯಾರ್ಡ್​ ಸರ್ಕಲ್​ನಿಂದ ಹೊರಗೆ ಕೇವಲ 5 ಜನ ಫೀಲ್ಡರ್ ​ಗಳಿರಬೇಕು. ಆದರೆ ಧೋನಿ ರನ್​ಔಟ್​ ಆಗುವ ಎಸೆತಕ್ಕೂ ಮೊದಲು ಗ್ರಾಫಿಕ್ಸ್​ ನಲ್ಲಿ ತೋರಿಸುವಂತೆ 6 ಜನ ಕ್ಷೇತ್ರ ರಕ್ಷಕರು 30 ಯಾರ್ಡ್​ನಿಂದ ಹೊರಗೆ ಫೀಲ್ಡಿಂಗ್​ ಮಾಡುತ್ತಿದ್ದರು. ಹೀಗಾಗಿ ಆ ಚೆಂಡನ್ನು ನೋಬಾಲ್ ಎಂದು ಘೋಷಣೆ ಮಾಡಬೇಕಿತ್ತು.  
ಒಂದು ವೇಳೆ ನಿಯಮಕ್ಕಿಂತ ಹೆಚ್ಚಿನ ಫೀಲ್ಡರ್​ಗಳು 30 ಯಾರ್ಡ್​ ಸರ್ಕಲ್​ನಿಂದ ಹೊರಗಿದ್ದರೆ ನೋ ಬಾಲ್​ ನೀಡಬೇಕು. ಆದರೆ ಅಂಫೈರ್​ ನಿರ್ಲಕ್ಷ್ಯದಿಂದ ನೋಬಾಲ್ ಇರುವುದು ಗೊತ್ತಾಗಿಲ್ಲ. ಇದರಿಂದ ಧೋನಿ ರನೌಟ್ ​ಗೆ ಬಲಿಯಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸತ್ಯಾಂಶವೇ ಬೇರೆ..?
ಆದರೆ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಂತೆ ಧೋನಿ ನಾಟೌಟ್ ಅಲ್ಲ.. ಅದು ನಿಯಮದ ಪ್ರಕಾರವೇ ಔಟ್.. ಏಕೆಂದರೆ ಅದು ನೋಬಾಲ್ ಆಗಿದ್ದರೂ, ರನೌಟ್ ಮಾಡಿದರೆ ಅದು ಔಟ್ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಧೋನಿ ರನೌಟ್ ನಲ್ಲಿ ಯಾವುದೇ ಗೊಂದಲವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com