ಐಸಿಸಿ ವಿಶ್ವಕಪ್ 2019: ಮೊದಲ ಸೆಮಿ ಫೈನಲ್ ನಲ್ಲಿ ಭಾರತದ ಸೋಲಿಗೆ 7 ಕಾರಣಗಳು

2019ರ ಐಸಿಸಿ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡ ಎನಿಸಿಕೊಂಡಿದ್ದ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 18 ರನ್ ಗಳಿಂದ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
ಲಂಡನ್: 2019ರ ಐಸಿಸಿ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡ ಎನಿಸಿಕೊಂಡಿದ್ದ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 18 ರನ್ ಗಳಿಂದ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಸೆಮಿಫೈನಲ್ ನಲ್ಲಿ ಭಾರತ ಸೋಲಿಗೆ ಈ ಏಳು ಕಾರಣಗಳನ್ನು ಗುರುತಿಸಲಾಗಿದೆ. 
* ಅತಿಯಾದ ಆತ್ಮ ವಿಶ್ವಾಸ
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿತ್ತು. ಅಲ್ಲದೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಇಂಗ್ಲೆಂಡ್ ತಂಡವೊಂದನ್ನು ಬಿಟ್ಟು ಉಳಿದ ಎಲ್ಲಾ ತಂಡಗಳ ಮೇಲಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿತ್ತು. ಇದು ತಂಡದ ಆತ್ಮವಿಶ್ವಾಸವನ್ನು ವೃದ್ಧಿಸಿತ್ತು. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 239 ರನ್ ಗಳಿಗೆ ಕಟ್ಟಿಹಾಕಿದ್ದು ಸಹ ತಂಡದ ಬ್ಯಾಟ್ಸ್ ಮನ್ ಗಳಲ್ಲಿ ಅತಿಯಾದ ಆತ್ಮ ವಿಶ್ವಾಸಕ್ಕೆ ಕಾರಣವಾಗಿ ಎಂದಿನಂತೆ ತಮ್ಮ ಬ್ಯಾಟಿಂಗ್ ಮಾಡದಿರುವುದು ಕಾರಣವಾಗಿದೆ. 
* ಮತದೇ ಹಳೆಯ ಕೆಟ್ಟ ಹೊಡೆತಗಳಿಗೆ ಜೋತು ಬಿದ್ದ ಅಗ್ರ ಕ್ರಮಾಂಕದ ಆಟಗಾರರು
ಈ ಹಿಂದೆ ಕೆಟ್ಟ ಹೊಡೆತಗಳನ್ನು ಹೊಡೆಯಲು ಹೋಗಿ ಔಟಾಗಿದ್ದ ಅಗ್ರ ಕ್ರಮಾಂಕದ ಆಟಗಾರರು ನ್ಯೂಜಿಲ್ಯಾಂಡ್ ಪಂದ್ಯದಲ್ಲೂ ಬೇಡವಾಗಿದ್ದ ಹೊಡೆತಕ್ಕೆ ಮುಂದಾಗಿದ್ದರು ಆರಂಭಿಕರಾದ ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ತಲಾ 1 ರನ್ ಗೆ ಔಟಾಗಿದ್ದು ತಂಡಕ್ಕೆ ದೊಡ್ಡ ಆಘಾತಕ್ಕೆ ತಂದಿಟ್ಟಿತ್ತು.
* ಪಿಚ್ ಮರ್ಮ ಅರಿಯದ ಕೊಹ್ಲಿ
ನ್ಯೂಜಿಲ್ಯಾಂಡ್ ತಂಡದ ಬೌಲರ್ ಗಳು ಸ್ವಿಂಗ್ ಮಾಡುವುದರಲ್ಲಿ ನಿಷ್ಣಾತರು ಎಂದು ತಿಳಿದಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ ಸಂಯಮದಿಂದ ಆಟವಾಡಲಿಲ್ಲ. ಇನ್ನು ಪಿಚ್ ವೇಗಿಗಳಿಗೆ ಪೂರಕವಾಗಿದೆ ಎಂಬುದನ್ನು ಅರಿಯದೆ ಹೋದರು. 
* ಗ್ಲಾಮರ್ ಶಾಟ್ ಗಳಿಗೆ ಬಲಿಯಾದ ಹಾರ್ದಿಕ್, ರಿಷಬ್
ಇನ್ನು ಸಂಕಷ್ಟದಲ್ಲಿದ್ದ ತಂಡಕ್ಕೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಆಸೆಯಾಗಿದ್ದರು. ಉತ್ತಮ ಜೊತೆಯಾಟ ನೀಡುತ್ತಿದ್ದರು. ಗ್ಲಾಮರ್ ಶಾಟ್ ಹೊಡೆಯಲು ಹೋಗಿ ಔಟಾದರು. ಇದು ಕೊನೆಯಲ್ಲಿ ಬರುವ ಬ್ಯಾಟ್ಸ್ ಮನ್ ಗಳ ಮೇಲಿನ ಒತ್ತಡಕ್ಕೆ ಕಾರಣವಾಯಿತು.
* ಸಿಂಗಲ್ ರನ್ ಗಳ ಕುರಿತ ನಿರ್ಲಕ್ಷ್ಯ
ವಿಕೆಟ್ ಗಳನ್ನು ಉಳಿಸಿಕೊಳ್ಳುವ ಭರದಲ್ಲಿ ಕೆಲ ಆಟಗಾರರು ಸಿಂಗಲ್ ರನ್ ಗಳನ್ನು ತೆಗೆದುಕೊಳ್ಳಲು ಮುಂದಾಗದಿರುವುದು ಕೊನೆಯಲ್ಲಿ ಕಡಿಮೆ ಎಸೆತದಲ್ಲಿ ಹೆಚ್ಚು ರನ್ ಬಾರಿಸಬೇಕಾದ ಒತ್ತಡಕ್ಕೆ ಕಾರಣವಾಯಿತು. ಮಧ್ಯ ಕ್ರಮಾಂಕದ ಆಟಗಾರರು ಸಿಂಗಲ್ ರನ್ ಗೆ ಹೆಚ್ಚು ಒತ್ತು ನೀಡಿದ್ದರೆ ರನ್ ರೇಟ್ ಜಾಸ್ತಿಯಾಗುವ ಸಾಧ್ಯತೆ ಇರುತ್ತಿತ್ತು.
* ಕೈ ಕೊಟ್ಟ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ
ಇನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದು ಸಹ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. 5ನೇ ಕ್ರಮಾಂಕದಲ್ಲಿ ಬರಬೇಕಿದ್ದ ಎಂಎಸ್ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಕಳುಹಿಸಿದ್ದು ಧೋನಿಗೆ ಹೆಚ್ಚು ಒತ್ತಡ ತಂದಿಟ್ಟಿತ್ತು. ಆದರೂ ಪಂದ್ಯದಲ್ಲಿ ಅರ್ಧ ಶತಕ ಪೂರೈಸಿದ ಧೋನಿ ಪಂದ್ಯವನ್ನು ಗೆಲ್ಲಿಸುವ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಆದರೆ ರನೌಟ್ ನಿಂದಾಗಿ ಧೋನಿ ಪೆಲಿವಿಯನ್ ಸೇರಿದ ಬಳಿಕ ತಂಡದ ಗೆಲುವಿನ ಆಸೆ ಕಮರಿತು. 
* ಕಿವೀಸ್ ಆಟಗಾರರ ಸಾಂಘಿಕ ಹೋರಾಟ
ಕಿವೀಸ್ ತಂಡದಲ್ಲಿ ಬೌಲರ್ ಗಳ ಸಾಂಘಿಕ ಹೋರಾಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ತಂಡ ಅಲ್ಪಮೊತ್ತಕ್ಕೆ ಕುಸಿದರು. ಎದೆ ಗುಂದದ ಕಿವೀಸ್ ಬೌಲರ್ ಗಳು ಆರಂಭದಿಂದಲೇ ಟೀಂ ಇಂಡಿಯಾ ವಿರುದ್ಧ ಮಾರಕ ಬೌಲಿಂಗ್ ದಾಳಿಗೆ ಇಳಿದಿದ್ದರು. ಪರಿಣಾಮ ಆರಂಭದಲ್ಲೇ 5 ರನ್ ಗಳಿಗೆ ಟೀಂ ಇಂಡಿಯಾದ ಪ್ರಮುಖ 3 ವಿಕೆಟ್ ಗಳನ್ನು ಪಡೆದು ಗೆಲುವನ್ನು ಸುಲಭವಾಗಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com