ಇಂಗ್ಲೆಂಡ್ ವರ್ಸಸ್ ಆಸ್ಟ್ರೇಲಿಯಾ, ವಿಶ್ವಕಪ್ ಇತಿಹಾಸದಲ್ಲೇ ನಾಲ್ಕನೇ ಅತೀ ದೊಡ್ಡ ಗೆಲುವು

ಎಡ್ಜ್ ಬ್ಯಾಸ್ಟನ್ ನಲ್ಲಿ ನಿನ್ನೆ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ ತಂಡ ಮಹತ್ವದ ದಾಖಲೆ ಬರೆದಿದ್ದು, ವಿಶ್ವಕಪ್ ಇತಿಹಾಸದಲ್ಲೇ ಇದು ತಂಡವೊಂದರ ನಾಲ್ಕನೇ ಅತೀ ದೊಡ್ಡ ಗೆಲುವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಎಡ್ಜ್ ಬ್ಯಾಸ್ಟನ್ ನಲ್ಲಿ ನಿನ್ನೆ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ ತಂಡ ಮಹತ್ವದ ದಾಖಲೆ ಬರೆದಿದ್ದು, ವಿಶ್ವಕಪ್ ಇತಿಹಾಸದಲ್ಲೇ ಇದು ತಂಡವೊಂದರ ನಾಲ್ಕನೇ ಅತೀ ದೊಡ್ಡ ಗೆಲುವಾಗಿದೆ.
ಹೌದು.. ನಿನ್ನೆ ಆಸ್ಟ್ರೇಲಿಯಾ ನೀಡಿದ್ದ 224 ರನ್ ಗಳ ಸಾಧಾರಣ ಗುರಿಯನ್ನು ಬೆನ್ನ ಹತ್ತಿದ್ದ ಇಂಗ್ಲೆಂಡ್ ತಂಡ ಜೇಸನ್ ರಾಯ್ (85 ರನ್) ಅಮೋಘ ಬ್ಯಾಟಿಂಗ್ ನೆರವಿನಿಂದಾಗಿ ಕೇವಲ 32.1 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಅಂದರೆ ಇಂಗ್ಲೆಂಡ್ ತಂಡ ತನ್ನ ಪಾಲಿನ ಇನ್ನಿಂಗ್ಸ್ ನ ಇನ್ನೂ 107 ಎಸೆತಗಳು ಬಾಕಿ ಇರುವಂತೆ ಇನ್ನೂ 8 ವಿಕೆಟ್ ಕೈ ಯಲ್ಲಿರುವಂತೆಯೇ ಗೆಲುವು ಸಾಧಿಸಿತು.
ಇದು ವಿಶ್ವಕಪ್ ಇತಿಹಾಸದಲ್ಲೇ ಸೆಮಿ ಫೈನಲ್ ಪಂದ್ಯದಲ್ಲಿ ದಾಖಲಾದ ನಾಲ್ಕನೇ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 1975ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಲೀಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ಪೇಲಿಯಾ ತಂಡ ಇನ್ನೂ 188 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತ್ತು. ಇದು ವಿಶ್ವಕಪ್ ಇತಿಹಾಸದ ಸೆಮಿ ಫೈನಲ್ ಪಂದ್ಯದ ಅತ್ಯಂತ ದೊಡ್ಡ ಗೆಲುವಾಗಿದೆ.
ಇದಾದ ಬಳಿಕ ಅದೇ 1975ರ ಟೂರ್ನಿಯಲ್ಲೇ ಓವಲ್ ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಇನ್ನೂ 119 ಎಸೆತಗಳು ಇರುವಂತೆಯೇ ಗೆಲುವು ಸಾಧಿಸಿತ್ತು. ಇದು ವಿಶ್ವಕಪ್ ನ 2ನೇ ಅತಿ ದೊಡ್ಡ ಗೆಲುವಾಗಿದೆ. ಇನ್ನು ಇದಾದ ಬಳಿಕ 2007ರಲ್ಲಿ ಗ್ರಾಸ್ ಐಸ್ಲೆಟ್ ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ 111 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತ್ತು. ಇದು ಮೂರನೇ ಅತೀ ದೊಡ್ಡ ಗೆಲುವಾಗಿದೆ
ಆ ಬಳಿಕ ನಿನ್ನೆ ನೆಡದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಇನ್ನೂ 107 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಿ ದಾಖಲೆ ಬರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com