ವಿಶ್ವಕಪ್ ಕ್ರಿಕೆಟ್ : ಟೂರ್ನಿಯಿಂದ ಹೊರಬಿದಿದ್ದರೂ ರೋಹಿತ್ ಶರ್ಮಾ ಈಗಲೂ ನಂಬರ್ 1

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋತು ಟೂರ್ನಿಯಿಂದ ಹೊರಬಿದಿದ್ದರೂ ಅತಿ ಹೆಚ್ಚು ರನ್ ಪಡೆದವರ ಪಟ್ಟಿಯಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರೇ ಅಗ್ರಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಲಂಡನ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋತು ಟೂರ್ನಿಯಿಂದ ಹೊರಬಿದಿದ್ದರೂ ಅತಿ ಹೆಚ್ಚು ರನ್ ಪಡೆದವರ ಪಟ್ಟಿಯಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರೇ ಅಗ್ರಸ್ಥಾನದಲ್ಲಿದ್ದಾರೆ.
ಹೆಚ್ಚು ರನ್ ಪಡೆದವರು: 9 ಪಂದ್ಯಗಳಿಂದ  ಐದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 81ರ ಸರಾಸರಿಯಲ್ಲಿ 648 ರನ್ ಗಳಿಸಿರುವ ರೋಹಿತ್ ಶರ್ಮಾ, ಈಗಲೂ ಕೂಡಾ ಅಗ್ರಸ್ಥಾನದಲ್ಲಿಯೇ ಇದ್ದಾರೆ. 
 ಆಸ್ಟ್ರೇಲಿಯಾದ ಡೇವಿಡ್ ವಾರ್ನರ್  647 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್  606, ಇಂಗ್ಲೆಂಡ್ ತಂಡದ ಜೋ ರೂಟ್  549,  ಕೇನ್ ವಿಲಿಯಮ್ಸ್ 548, ಆರನ್ ಫಿಂಚ್ 507, ಜೋನ್ ಬೈರ್ ಸ್ಟೋವ್ 496, ಪಾಕಿಸ್ತಾನದ ಬಾಬರ್ ಅಜಮ್  474, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 442, ಹಾಗೂ ಇಂಗ್ಲೆಂಡ್  ತಂಡಡ ಜೀಸನ್ ರಾಯ್ 426 ರನ್  ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೋಲಿನ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕುವಲ್ಲಿ ಡೇವಿಡ್ ವಾರ್ನರ್ ವಿಫಲರಾಗಿದ್ದಾರೆ. ಇಂಗ್ಲೆಂಡ್ ತಂಡಡ ಜೋರೂಟ್ ಹಾಗೂ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ ಅವರಿಗೆ  ಶರ್ಮಾ ಅವರನ್ನು ಹಿಂದಿಕುವ ಅವಕಾಶವಿದೆ. ಆದರೆ, ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದರ ಆಧಾರದ ಮೇಲೆ ಅದು ನಿರ್ಧಾರವಾಗಲಿದೆ.
ಹೆಚ್ಚಿನ ವಿಕೆಟ್ ಪಡೆದವರು : ಇನ್ನೂ ಅತ್ಯಂತ ಹೆಚ್ಚು ವಿಕೆಟ್ ಗಳನ್ನು ಪಡೆದವರ ಪೈಕಿಯಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 27 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.  ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ 20 ವಿಕೆಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಜೋಪ್ತಾ ಆರ್ಚರ್  19 ವಿಕೆಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿ ಭಾರತದ ಜಸ್ಪ್ರೀತ್ ಬೂಮ್ರಾ 18 ವಿಕೆಟ್ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್ ನ ಲಾಕಿ ಫರ್ಗುಸನ್ 18, ಟ್ರೆಂಟ್ ಬೌಲ್ಟ್ 17, ಪಾಕಿಸ್ತಾನದ ಮೊಹಮ್ಮದ್ ಅಮೀರ್ 17, ಇಂಗ್ಲೆಂಡಿನ ಮಾರ್ಕ್ ವುಡ್ 17, ಶಾಹೀನ್ ಅಫ್ರಿದಿ 16 ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್  14 ವಿಕೆಟ್ ಪಡೆಯುವ ಮೂಲಕ 10 ನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com