ಐಸಿಸಿ ವಿಶ್ವಕಪ್ 2019 ಫೈನಲ್: ದರ ಏರಿದರೂ ಕುಗ್ಗಿಲ್ಲ ಉತ್ಸಾಹ, ದಾಖಲೆ ಸಂಖ್ಯೆ ಟಿಕೆಟ್ ಮಾರಾಟ!

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ದಾಖಲೆ ಸಂಖ್ಯೆಯ ಟಿಕೆಟ್ ಗಳು ದುಬಾರಿ ಬೆಲೆಗೆ ಮಾರಾಟವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ದಾಖಲೆ ಸಂಖ್ಯೆಯ ಟಿಕೆಟ್ ಗಳು ದುಬಾರಿ ಬೆಲೆಗೆ ಮಾರಾಟವಾಗಿದೆ.
ಈ ಬಗ್ಗೆ ಸ್ವತಃ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಮಾಹಿತಿ ನೀಡಿದ್ದು, ಫೈನಲ್ ಪಂದ್ಯಕ್ಕಾಗಿ ದಾಖಲೆ ಸಂಖ್ಯೆಯ ಟಿಕೆಟ್ ಗಳು ಮಾರಾಟವಾಗಿವೆ. ಟೂರ್ನಿಯ ಆಯೋಜಕ ಸಂಸ್ಥೆಯ ವೆಬ್ ಸೈಟಿನಿಂದ ಟಿಕೆಟ್ ಗಳ ಆನ್ ಲೈನ್ ಮಾರಾಟ ಆರಂಭವಾಗುತ್ತಿದ್ದಂತೆಯೇ ಕ್ರಿಕೆಟ್ ಪ್ರೇಮಿಗಳು ಮುಗಿಬಿದ್ದು ಟಿಕೆಟ್ ಕೊಳ್ಳಲಾರಂಭಿಸಿದರು. ಹೀಗಾಗಿ ಬೇಡಿಕೆ ಹೆಚ್ಚಾದಂತೆ ಟಿಕೆಟ್ ದರ ಕೂಡ ಹೆಚ್ಚು ಮಾಡಲಾಗಿದ್ದು, ಪ್ರಸ್ತುತ ಒಂದು ಪ್ರೀಮಿಯಂ ಟಿಕೆಟ್ ವ ಬೆಲೆ ಬರೊಬ್ಬರಿ 13.78 ಲಕ್ಷ ರೂ,ಗಳಿಗೆ (16 ಸಾವಿರ ಯೂರೋ) ಏರಿಕೆಯಾಗಿದೆ.
ಆದರೂ ಅಭಿಮಾನಿಗಳು ಟೆಕೆಟ್ ಖರೀದಿ ನಿಂತಿಲ್ಲ. ಇನ್ನು ಭಾರತ ತಂಡ ಸೆಮೀಸ್ ಪ್ರವೇಶ ಮಾಡುತ್ತಿದ್ದಂತೆಯೇ ಸಾವಿರಾರು ಅಭಿಮಾನಿಗಳು ಫೈನಲ್ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಿದ್ದರು. ಆದರೆ ಸೆಮೀಸ್ ನಲ್ಲಿ ಭಾರತ ಸೋತ ಬಳಿಕ ಕೆಲ ಅಭಿಮಾನಿಗಳು ತಮ್ಮ ಟಿಕೆಟ್ ಗಳನ್ನು ಮಾರಾಟ ಮಾಡಿದ್ದು, ಮತ್ತೆ ಕೆಲವರು ಟಿಕೆಟ್ ಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇನ್ನು ಯಥೇಚ್ಛ ಟಿಕೆಟ್ ಗಳನ್ನು ಖರೀದಿಸಿದವರ ಪಟ್ಟಿಯಲ್ಲಿ ಕೆಲ ಸಂಸ್ಥೆಗಳೂ ಕೂಡ ಇದ್ದು, ಇವು ಮೂಲ ಬೆಲೆಗೆ ಟಿಕೆಟ್ ಖರೀದಿಸಿ ಅದನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ.
ಫುಟ್ ಬಾಲ್ ಕ್ರೀಡೆಯಲ್ಲಿ ಇದು ಅಪರಾಧವಾದರೂ, ಕ್ರಿಕೆಟ್ ನಲ್ಲಿ ಇದು ಅಪರಾಧವಲ್ಲ. ಪಂದ್ಯ ವೀಕ್ಷಣೆಗೆ ಹೋಗುವುದು ಇಷ್ಟವಿಲ್ಲದವರು ತಮ್ಮ ಟಿಕಟ್ ಅನ್ನು ಬೇರೊಬ್ಬರಿಗೆ ಮಾರಾಟ ಮಾಡಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಇದು ದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿದೆ ಎಂದು ಐಸಿಸಿ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾತನಾಡಿರುವ ಐಸಿಸಿ ವಿಶ್ವಕಪ್ ನಿರ್ವಾಹಕ ನಿರ್ದೇಶಕ ಸ್ಟೀವ್ ಎಲ್ವರ್ಥಿ ಅವರು, ಕಾಳಸಂತೆಯಲ್ಲಿ ಟಿಕೆಟ್ ಗಳ ಮಾರಾಟಕ್ಕೆ ಕಡಿವಾಣ ಹಾಕಲು ಐಸಿಸಿ ಕೆಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಸೆಕೆಂಡರಿ ಸೈಟ್ ಗಳಿಗೆ ಟಿಕೆಟ್ ಮಾರಾಟವಾದ ವಿಚಾರ ತಿಳಿದರೆ. ಅಂತಹ ಟಿಕೆಟ್ ಮಾನ್ಯತೆ ರದ್ದು ಮಾಡುತ್ತೇವೆ. ಬ್ರಿಟನ್ ನಲ್ಲಿ ಈ ಕುರಿತಂತೆ ಯಾವುದೇ ರೀತಿಯ ಸೂಕ್ತ ಕಾನೂನು ಇಲ್ಲದೇ ಇರುವುದು ಕಠಿಣ ಕ್ರಮ ತೆಗೆದುಕೊಳ್ಳಲು ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com