ಫೈನಲ್ಸ್ ಗೆ ಇಂಡಿಯಾ ಫ್ಯಾನ್ಸ್ ಬರಲ್ವಾ? ಚಿಂತೆ ಇಲ್ಲ,ಅಧಿಕೃತವಾಗಿ ಟಿಕೆಟ್ ಮರು ಮಾರಾಟ ಮಾಡಿ- ನೀಶಾಮ್

ಫೈನಲ್ ಪಂದ್ಯ ವೀಕ್ಷಣೆಗೆ ಬಾರದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಧಿಕೃತವಾಗಿ ಟಿಕೆಟ್ ಗಳನ್ನು ಮರು ಮಾರಾಟ ಮಾಡಬೇಕೆಂದು ಕಿವೀಸ್ ತಂಡದ ಆಲ್ ರೌಂಡರ್ ಜಿಮ್ಮಿ ನೀಶಾಮ್ ಮನವಿ ಮಾಡಿಕೊಂಡಿದ್ದಾರೆ.
ನೀಶಾಮ್
ನೀಶಾಮ್
ಲಂಡನ್ :  ನಾಳೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ವೀಕ್ಷಣೆಗೆ ಬಾರದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಧಿಕೃತವಾಗಿ ಟಿಕೆಟ್ ಗಳನ್ನು ಮರು ಮಾರಾಟ ಮಾಡಬೇಕೆಂದು  ಕಿವೀಸ್ ತಂಡದ ಆಲ್ ರೌಂಡರ್ ಜಿಮ್ಮಿ ನೀಶಾಮ್ ಮನವಿ ಮಾಡಿಕೊಂಡಿದ್ದಾರೆ.
'' ಪ್ರೀತಿಯ ಭಾರತೀಯ ಅಭಿಮಾನಿಗಳೇ, ಫೈನಲ್ ಪಂದ್ಯ ವೀಕ್ಷಣೆಗೆ ಬಾರದಿದಲ್ಲೀ  ಅಧಿಕೃತ ಪ್ಲಾಟ್ ಫಾರಂಗಳ ಮೂಲಕ ಮರು ಮಾರಾಟ ಮಾಡಿ. ದೊಡ್ಡ ಆದಾಯ ಮಾಡಲು ಪ್ರಯತ್ನಿಸಿ ಎಂಬ ಪ್ರೇರಣೆ ಎಂಬುದು ನನ್ನಗೆ ಗೊತ್ತಿದೆ. ಆದರೆ, ಹಣ ಮಾತ್ರವಲ್ಲ, ಕ್ರಿಕೆಟ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಿ ಎಂದು ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com