ನಿವೃತ್ತಿ ವಿವಾದ: ಎಬಿಡಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ ಹೇಳಿದ್ದೇನು?

ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ನಿವೃತ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ನಿವೃತ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ಈ ಕುರಿತಂತೆ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ವಿರಾಟ್ ಕೊಹ್ಲಿ, ನಾನು ಕಂಡಂತೆ ಎಬಿಡಿ ವಿಲಿಯರ್ಸ್ ಅತ್ಯಂತ ಪ್ರಾಮಾಣಿಕ ಮತ್ತು ಬದ್ಧತೆ ಇರುವ ವ್ಯಕ್ತಿ, ನೀನು ನನ್ನ ಹಿರಿಯ ಸಹೋದರ ಇದ್ದಂತೆ. ಆದರೆ ಇತ್ತೀಚೆಗೆ ಎಬಿಡಿ ನಿವೃತ್ತಿ ಕುರಿತ ವಿಚಾರಗಳನ್ನು ಕೇಳಿ ನೋವಾಗಿದೆ. ಆದರೆ ನಿಮ್ಮೊಂದಿಗೆ ನಾವಿದ್ದು, ನಿಜಕ್ಕೂ ವ್ಯಕ್ತಿಯೊಬ್ಬರ ವೈಯುಕ್ತಿಕ ಜೀವನದಲ್ಲಿ ಮತ್ತೊಬ್ಬರ ಮಧ್ಯ ಪ್ರವೇಶ ಮಾಡಿ ಮಾತನಾಡುವುದು ನಿಜಕ್ಕೂ ದುಃಖದ ಸಂಗತಿ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ಕೊಹ್ಲಿ ಹಾಗೂ ಎಬಿಡಿ ಐಪಿಎಲ್ ನಲ್ಲಿ ಆರ್ ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದು, ಹೊರ ದೇಶದ ಟೂರ್ನಿಗಳಲ್ಲಿ ಭಾಗವಹಿಸುವುದಕ್ಕೇ ಎಬಿಡಿ ನಿವೃತ್ತಿಯಾಗಿದ್ದಾರೆ. ಅವರಿಗೆ ದೇಶಕ್ಕಿಂತ ಹಣವೇ ಮುಖ್ಯ ಎಂದು ವ್ಯಾಪಕ ಟೀಕೆ ಮಾಡಲಾಗಿತ್ತು. ಇದಕ್ಕೆ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಸೇರಿದಂತೆ ಹಲವು ಖ್ಯಾತ ನಾಮ ಕ್ರಿಕೆಟಿಗರೂ ಕೂಡ ಧ್ವನಿ ಸೇರಿಸಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ತಮ್ಮ ಮೌನ ಮುರಿದಿರುವ ಎಬಿಡಿ, 'ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡದಲ್ಲಿ ತನ್ನನ್ನು ಸೇರಿಸಿ ಎಂದು ಒತ್ತಾಯ ಮಾಡಿಲ್ಲ. ಬದಲಿಗೆ ದೇಸಿ ತಂಡಕ್ಕೆ ನನ್ನ ಅಗತ್ಯವಿದ್ದರೆ. ನಾನು ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಎಂಬುದಷ್ಟೇ ಹೇಳಿದ್ದೆ. ಮೇ 2018ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದೆ ಯಾಕೆಂದರೆ ನಾನು ನನ್ನ ಕೆಲದ ಒತ್ತಡವನ್ನು ಕಡಿಮೆಗೊಳಿಸಿ ಪತ್ನಿ ಮತ್ತು ಪುಟಾಣಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿದ್ದೆ. ಆದರೆ ಇದನ್ನು ಕೆಲವರು ನಾನು ನಿವೃತ್ತಿ ಹೇಳಿದ್ದು ಹಣದಾಸೆಗಾಗಿ ಎಂದರು. ದೇಶ ಬದಿಗಿಟ್ಟು ಹಣಕ್ಕಾಗಿ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ನಾನು ಹೀಗೆ ಮಾಡಿದೆ ಎಂದು ಒಂದಿಷ್ಟು ಮಂದಿ ಆಡಿಕೊಂಡರು. ಆದರೆ ಅವರ ಹೇಳಿಕೆ ಸರಿಯಲ್ಲ  ಎಂದು ಎಬಿಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com