ವಿಶ್ವಕಪ್ ಬೆನ್ನಲ್ಲೇ, ಐಪಿಎಲ್ ಗೆ ಸಿದ್ಧತೆ, ಈ ಬಾರಿ 8 ಅಲ್ಲ 10 ತಂಡಗಳಿಗೆ ಅವಕಾಶ!

ವಿಶ್ವಾದ್ಯಂತ ಐಸಿಸಿ ವಿಶ್ವಕಪ್ ಫೈನಲ್ ಕುರಿತಂತೆ ಸುದ್ದಿಗಳು ಹರಿದಾಡುತ್ತಿದ್ದರೆ, ಇತ್ತ ಭಾರತದಲ್ಲಿ ಮಾತ್ರ ಈಗಲೇ ಐಪಿಎಲ್ ಟೂರ್ನಿ ಕುರಿತಂತೆ ಸುದ್ದಿಗಳು ಆರಂಭವಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವಾದ್ಯಂತ ಐಸಿಸಿ ವಿಶ್ವಕಪ್ ಫೈನಲ್ ಕುರಿತಂತೆ ಸುದ್ದಿಗಳು ಹರಿದಾಡುತ್ತಿದ್ದರೆ, ಇತ್ತ ಭಾರತದಲ್ಲಿ ಮಾತ್ರ ಈಗಲೇ ಐಪಿಎಲ್ ಟೂರ್ನಿ ಕುರಿತಂತೆ ಸುದ್ದಿಗಳು ಆರಂಭವಾಗಿವೆ.
ಹೌದು.. ಮುಂದಿನ ಐಪಿಎಲ್ ಸೀಸನ್ ನಲ್ಲಿ ಮತ್ತೆ ಎರಡು ಹೊಸ ತಂಡಗಳನ್ನು ಸೇರ್ಪಡೆ ಮಾಡುವ ಕುರಿತು ಐಪಿಎಲ್ ಗವರ್ನಿಂಗ್ ಬಾಡಿ ಗಂಭೀರ ಚಿಂತನೆಯಲ್ಲಿ ತೊಡಗಿದೆ. 2010ರಿಂದಲೂ ಸಾಕಷ್ಚು ಉದ್ಯಮ ಸಂಸ್ಥೆಗಳು ಐಪಿಎಲ್ ಫ್ರಾಂಚೈಸಿಗಾಗಿ ಪ್ರಯತ್ನಿಸುತ್ತಿದ್ದು, ಇದೀಗ ಈ ಉದ್ಯಮ ಸಂಸ್ಥೆಗಳ ಪೈಕಿ ಎರಡು ಸಂಸ್ಥೆಗಳಿಗೆ ಫ್ರಾಂಚೈಸಿ ನೀಡಲು ಐಪಿಎಲ್ ಆಡಳಿತ ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ.
ಅಂದರಂತೆ 2020ರ ಐಪಿಎಲ್ ಟೂರ್ನಿಯಲ್ಲಿ 8 ಅಲ್ಲ ಬದಲಿಗೆ 10 ತಂಡಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಗುಜರಾತ್ ನ ಅಹ್ಮದಾಬಾದ್ ಫ್ರಾಂಚೈಸಿ ಪಡೆಯಲು ಅದಾನಿ ಗ್ರೂಪ್ಸ್ ಸಂಸ್ಥೆ ಯತ್ನಿಸುತ್ತಿದ್ದು, ಈ ಬಾರಿ ಆ ಸಂಸ್ಥೆಗೆ ಫ್ರಾಂಚೈಸಿ ನೀಡುವ ಸಾಧ್ಯತೆ ಇದೆ. ಅಂತೆಯೇ ಕೋಲ್ಕತಾ ಫ್ರಾಂಚೈಸಿ ಗೋಯಂಕಾ ಸಂಸ್ಥೆಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 
2011ರಲ್ಲೂ ಬಿಸಿಸಿಐ ಇದೇ ರೀತಿ ತಂಡಗಳ ವಿಸ್ತರಣೆಗೆ ಮುಂದಾಗಿತ್ತು. ಆದರೆ, ವೇಳಾಪಟ್ಟಿ ದಿನಾಂಕಗಳ ಅಭಾವದಿಂದಾಗಿ ಅದನ್ನು ಕೈ ಬಿಡಲಾಗಿತ್ತು. ಇದೀಗ ಸಂಪೂರ್ಣ ಪ್ಲಾನ್ ನೊಂದಿಗೆ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com