ಐಸಿಸಿ ವಿಶ್ವಕಪ್ 2019: ಐತಿಹಾಸಿಕ ಕ್ಷಣಕ್ಕೆ ಕ್ರಿಕೆಟ್ ಕಾಶಿ ಸಜ್ಜು, ಇಂದು ಕಿವೀಸ್-ಇಂಗ್ಲೆಂಡ್ ನಡುವೆ ಪ್ರಶಸ್ತಿಗಾಗಿ ಪೈಪೋಟಿ

ಕ್ರಿಕೆಟ್ ಜಗತ್ತಿನ ಐತಿಹಾಸಿಕ ಕ್ಷಣಕ್ಕೆ ವೇದಿಕೆಯಾಗಲು ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಮೈದಾನ ಸಜ್ಜಾಗಿದ್ದು, ವಿಶ್ವಕಪ್ ಗಾಗಿ ಇಂದು ನ್ಯೂಜಿಲೆಂಡ್ ಮತ್ತು ಅತಿಥೇಯ ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

Published: 14th July 2019 12:00 PM  |   Last Updated: 14th July 2019 11:16 AM   |  A+A-


England vs New Zealand Final Battle: After 13 years World Cup will witness new Champion

ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ಕ್ರಿಕೆಟ್ ಜಗತ್ತಿನ ಐತಿಹಾಸಿಕ ಕ್ಷಣಕ್ಕೆ ವೇದಿಕೆಯಾಗಲು ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಮೈದಾನ ಸಜ್ಜಾಗಿದ್ದು, ವಿಶ್ವಕಪ್ ಗಾಗಿ ಇಂದು ನ್ಯೂಜಿಲೆಂಡ್ ಮತ್ತು ಅತಿಥೇಯ ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದ್ದು, ಇಂದು ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಆಗಿದ್ದ ಭಾರತ ತಂಡವನ್ನು ಮಣಿಸಿದ ನ್ಯೂಜಿಲೆಂಡ್ ಮತ್ತು ಐದು ಬಾರಿ ಚಾಂಪಿಯನ್ ಪ್ರಬಲ ಆಸ್ಟ್ರೇಲಿಯಾವನ್ನು ಮಣಿಸಿದ ಇಂಗ್ಲೆಂಡ್ ತಂಡ ವಿಶ್ಪಕಪ್ ಫೈನಲ್ ಪ್ರವೇಶ ಮಾಡಿದ್ದು, ಈ ಎರಡೂ ತಂಡಗಳಲ್ಲಿ ಯಾವುದೇ ತಂಡ ಫೈನಲ್ ನಲ್ಲಿ ಜಯ ಗಳಿಸಿದರೂ, ನೂತನ ಇತಿಹಾಸ ನಿರ್ಮಾಣವಾಗಲಿದೆ. 

ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರೆ, ಇಂಗ್ಲೆಂಡ್ 1992ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಬರೋಬ್ಬರಿ 27 ವರ್ಷ (9969 ದಿನ)ಗಳ ಬಳಿಕ ತಂಡ ಫೈನಲ್‌ ಗೇರಿದೆ.  92ರ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಇಂಗ್ಲೆಂಡ್‌, ಈ ಬಾರಿ ಟ್ರೋಫಿ ಎತ್ತಿಹಿಡಿಯುವ ವಿಶ್ವಾಸದಲ್ಲಿದೆ. ಆ ಮೂಲಕ ಕ್ರಿಕೆಟ್ ಜನಕರೇ ಆದರೂ ಒಮ್ಮೆಯೂ ವಿಶ್ವಕಪ್ ಗೆಲ್ಲದ ಶಾಪದಿಂದ ಮುಕ್ತರಾಗಲು ಇಂಗ್ಲೆಂಡ್ ತಂಡ ಪ್ರಯತ್ನಿಸಲಿದೆ. 

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಇದುವರೆಗೂ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ. ಕಳೆದ ಬಾರಿ ನ್ಯೂಜಿಲೆಂಡ್  ತಂಡಕ್ಕೆ ಟ್ರೋಫಿ ಗೆಲ್ಲೋ ಅವಕಾಶವಿತ್ತ. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲು ಅನುಭವಿಸೋ  ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದರೂ, ವಿಶ್ವಕಪ್ ಜಯಿಸಲಾಗದೇ ನಿರಾಶೆ ಅನುಭವಿಸಿದ್ದ ನ್ಯೂಜಿಲೆಂಡ್ ತಂಡ ಈ ಬಾರಿ ಶತಾಯಗತಾಯ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿದೆ. 

ಹೀಗಾಗಿ 1996ರ ಬಳಿಕ ಇದೇ ಮೊದಲ ಬಾರಿಗೆ ಕ್ರಿಕೆಟ್‌ ಜಗತ್ತು ಹೊಸ ವಿಶ್ವ ಚಾಂಪಿಯನ್ನರನ್ನು ಸ್ವಾಗತಿಸಲಿದೆ. 1996ರಲ್ಲಿ ಶ್ರೀಲಂಕಾ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಬಳಿಕ ಆಸ್ಟ್ರೇಲಿಯಾ ಪ್ರಾಬಲ್ಯ ಮೆರೆಯಿತು. 1999, 2003, 2007ರಲ್ಲಿ ಆಸ್ಟ್ರೇಲಿಯಾ ಟ್ರೋಫಿ ಗೆದ್ದುಕೊಂಡರೆ, 2011ರಲ್ಲಿ ಭಾರತ ಗೆದ್ದಿತ್ತು. ಇನ್ನು 2015ರಲ್ಲಿ ಮತ್ತೆ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದುಕೊಂಡಿತು. ಹೀಗಾಗಿ 13 ವರ್ಷಗಳ ಬಳಿಕ ಹೊಸ ತಂಡವೊಂದು ಟ್ರೋಫಿ ಗೆಲ್ಲಲಿದೆ.
Stay up to date on all the latest ಕ್ರಿಕೆಟ್ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp