ವಿಶ್ವಕಪ್ ಕ್ರಿಕೆಟ್ :ಅಖ್ತರ್ ಊಹೆಯಂತೆ ಈ ತಂಡ ವಿಶ್ವ ಚಾಂಪಿಯನ್ ಆಗಲಿದೆ - ವಿಡಿಯೋ

ಲಾರ್ಡ್ಸ್ ಮೈದಾನದಲ್ಲಿ ಕಿವೀಸ್ ಹಾಗೂ ಇಂಗ್ಲೆಂಡ್ ನಡುವಣ ಐಸಿಸಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಯಾರು ಟ್ರೋಫಿಯನ್ನು ಎತ್ತಿಹಿಡಿಯಲಿದ್ದಾರೆ ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಊಹಿಸಿದ್ದಾರೆ.
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್
ಲಂಡನ್ : ಲಾರ್ಡ್ಸ್ ಮೈದಾನದಲ್ಲಿ ಕಿವೀಸ್ ಹಾಗೂ ಇಂಗ್ಲೆಂಡ್ ನಡುವಣ ಐಸಿಸಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಯಾರು ಟ್ರೋಫಿಯನ್ನು ಎತ್ತಿಹಿಡಿಯಲಿದ್ದಾರೆ ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಊಹಿಸಿದ್ದಾರೆ.
1992 ರ ನಂತರ ಇಂಗ್ಲೆಂಡ್ ಫೈನಲ್  ಗೆ ಬಂದಿದ್ದರೆ, 2015ರ ನಂತರ ನ್ಯೂಜಿಲ್ಯಾಂಡ್  ಮಹಾಕಾಳಗಕ್ಕೆ ಲಗ್ಗೆ ಇಟ್ಟಿದೆ. ಹಾಗಾಗೀ ಯಾರು ಚೊಚ್ಚಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ಇಡೀ ವಿಶ್ವವೇ ಕಾಯುತ್ತಿದೆ. 
ಯಾರು ಈ ಬಾರಿ ವಿಶ್ವಕಪ್ ಗೆಲ್ಲಲಿದ್ದಾರೆ ಎಂಬುದನ್ನು ಊಹಿಸಿ ಅಖ್ತರ್ ಯೂ ಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ ಟಾಸ್ ಗೆದ್ದರೆ  ಉತ್ತಮ ರನ್ ಗಳಿಸುವ ಸಾಧ್ಯತೆ ಹೆಚ್ಚಾಗಿದೆ. 
ಆದರೆ, ತೀವ್ರ ಪೈಪೋಟಿ ನೀಡುವ ನಿಟ್ಟಿನಲ್ಲಿ ಮಾರ್ಟಿನ್ ಗುಪ್ಟಿಲ್ ಹಾಗೂ ಹೆನ್ರಿ ನಿಕೋಲಸ್ ಅವರಿಗೆ ಇದು ತುಂಬಾ ಪ್ರಮುಖವಾಗಿದೆ. ನ್ಯೂಜಿಲ್ಯಾಂಡ್ ಗೆ ಬೆಂಬಲ ನೀಡುತ್ತೇನೆ. ಆದರೆ, ಇಂಗ್ಲೆಂಡ್ ತಂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ತಂಡ ಬಲಿಷ್ಠವಾಗಿದ್ದು, ನಿಗದಿತ ಓವರ್ ಗಳ  ವಿಶ್ವಕಪ್  ಗೆದ್ದು,  ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com