ಐಸಿಸಿ ವಿಶ್ವಕಪ್ 2019: ಟೂರ್ನಿಯಿಂದ ಭಾರತ ಹೊರ ಬಿದ್ದ ಬೆನ್ನಲ್ಲೇ ಐಸಿಸಿ, ಜಾಹಿರಾತು ಸಂಸ್ಥೆಗಳಿಗೆ ಭಾರಿ ನಷ್ಟ!

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋತು ಹೊರ ಬಿದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ, ಅದರ ಪ್ರಾಯೋಕತ್ವ ಸಂಸ್ಥೆಗಳು ಮತ್ತು ಜಾಹಿರಾತು ಸಂಸ್ಥೆಗಳು ಭಾರಿ ನಷ್ಟ ಅನುಭವಿಸಿವೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋತು ಹೊರ ಬಿದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ, ಅದರ ಪ್ರಾಯೋಕತ್ವ ಸಂಸ್ಥೆಗಳು ಮತ್ತು ಜಾಹಿರಾತು ಸಂಸ್ಥೆಗಳು ಭಾರಿ ನಷ್ಟ ಅನುಭವಿಸಿವೆ ಎಂದು ಹೇಳಲಾಗಿದೆ.
ಈಗಾಗಲೇ ಫೈನಲ್ ಪಂದ್ಯಕ್ಕಾಗಿ ಟಿಕೆಟ್ ಖರೀದಿಸಿದ್ದ ಭಾರತೀಯ ಮೂಲದ ಅಭಿಮಾನಿಗಳು ತಮ್ಮ ಟಿಕೆಟ್ ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದು, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಪ್ರಿಯರು ಟಿಕೆಟ್ ಅಭಾವ ಎದುರಿಸುತ್ತಿದ್ದಾರೆ. ಅಂತೆಯೇ ಇದೀಗ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕು ಪಡೆದಿದ್ದ ಸ್ಟಾರ್ ಇಂಡಿಯಾ ಸಂಸ್ಥೆಗೂ ಬಿಸಿ ತಟ್ಟಿದ್ದು, ಸ್ಟಾರ್ ಇಂಡಿಯಾ ಸುಮಾರು 15 ಕೋಟಿ ರೂ ನಷ್ಟ ಅನುಭವಿಸಿದೆ ಎನ್ನಲಾಗಿದೆ.
ಟೂರ್ನಿಯಲ್ಲಿ ಭಾರತವಿದ್ದ ಅಷ್ಟೂ ದಿನವೂ ಜಾಹಿರಾತುಗಳ ಮೂಲಕ ಸ್ಟಾರ್ ಇಂಡಿಯಾ ಸಾಕಷ್ಟು ಆದಾಯ ಗಳಿಸಿತ್ತು. ಆದರೆ ಭಾರತ ಹೊರ ಬಿದ್ದ ಬಳಿಕ ಅದರ ಜಾಹಿರಾತುಗಳ ದರ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಈ ಹಿಂದೆ ಪ್ರತೀ 10 ಸೆಕೆಂಡ್ ಗಳ ಜಾಹಿರಾತಿಗೆ ಸಂಸ್ಥೆ 30 ರಿಂದ 35 ಲಕ್ಷ ರೂಗಳನ್ನು ಪಡೆಯುತ್ತಿತ್ತು. ಇದೀಗ ಅದು ಕೇವಲ 10 ರಿಂದ 15 ಲಕ್ಷಕ್ಕೆ ಕುಸಿದಿದೆ. ಅಂತೆಯೇ ಟಿವಿ ಪ್ರಾಯೋಜಕತ್ವ ದರ ಕೂಡ 8 ರಿಂದ 10ಲಕ್ಷಕ್ಕೆ ಕುಸಿದಿದೆ. 
ಲೀಗ್ ಹಂತದಲ್ಲಿ ಇಂಡೋ-ಪಾಕ್ ಪಂದ್ಯ ನಡೆದ ಸಂದರ್ಭದಲ್ಲಿ ಇದೇ ದಕ 25ಲಕ್ಷಕ್ಕೂ ಅಧಿಕ ಇತ್ತು ಎನ್ನಲಾಗಿದೆ. ವಿಶ್ವಕಪ್ ಕ್ರಿಕೆಟ್‌ನ ಪಂದ್ಯದಲ್ಲಿ ಜಾಹೀರಾತಿಗಾಗಿ ಒಟ್ಟು 5,500 ಸೆಕೆಂಡ್‌ಗಳ ಅವಕಾಶವಿದೆ. ಫೈನಲ್‌ ಪಂದ್ಯದಲ್ಲಿ ಅಂತಿಮ ಜಾಹೀರಾತು ಬೇಡಿಕೆ ಆಧರಿಸಿ 7,000 ಸೆಕೆಂಡ್‌ಗಳ ಅವಕಾಶ ಸೃಷ್ಟಿಸಬಹುದಾಗಿದೆ. ಫೋನ್‌ ಪೇ, ಒನ್‌ಫ್ಲಸ್‌,  ಹ್ಯಾವೆಲ್ಸ್, ಅಮೆಜಾನ್, ಡ್ರೀಮ್ 11, ಎಂಆರ್‌ಎಫ್ ಟಯರ್‌ಗಳು, ಊಬರ್, ಒಪೊ, ಫಿಲಿಪ್ಸ್, ಸಿಯೆಟ್‌  ಟಯರ್, ಸ್ವಿಗ್ಗಿ, ಏರ್‌ಟೆಲ್, ವೊಡಾಫೋನ್, ನೆಟ್‌ಫ್ಲಿಕ್ಸ್, ಪೈಸಾಬಜಾರ್ ಮತ್ತು ಐಸಿಐಸಿಐ ಲೊಂಬಾರ್ಡ್ ಒಳಗೊಂಡಂತೆ 40 ಕಂಪನಿಗಳೊಂದಿಗೆ ಸ್ಟಾರ್‌ ಜಾಹೀರಾತು ಒಪ್ಪಂದ ಮಾಡಿಕೊಂಡಿದೆ.
ಇನ್ನು ಹಾಲಿ ವಿಶ್ವಕಪ್ ಟೂರ್ನಿಯಿಂದ ಸ್ಟಾರ್ ಇಂಡಿಯಾ ಸಂಸ್ಥೆ ಸುಮಾರು 200 ಕೋಟಿ ಆದಾಯ ಗಳಿಸುವ ಲೆಕ್ಕಾಚಾರ ಹಾಕಿತ್ತು. ಅಂತೆಯೇ ಜಾಹಿರಾತುಗಳ ಮೂಲಕ ಸುಮಾರು 1200 ರಿಂದ 1500 ಕೋಟಿ ರೂ ಆದಾಯ ಗಳಿಸುವ ಲೆಕ್ಕಾಚಾರ ಹಾಕಿತ್ತು. ಆದರೆ ಪ್ರಸ್ತುತ ಈಗ ಈ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com