ಕ್ರೀಡೆಗಿಂತ ಬೇಕರಿ ಕೆಲಸ ಉತ್ತಮ: ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ಕ್ರಿಕೆಟಿಗನ ನೋವಿನ ಮಾತು!

ಮಕ್ಕಳೆ ಕ್ರೀಡೆಗಿಂತ ಬೇಕರಿ ಕೆಲಸವನ್ನು ಆಯ್ದುಕೊಳ್ಳಿ ಎಂದು ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನಿಶಾಮ್ ನೋವಿನಿಂದ ಹೇಳಿದ್ದಾರೆ.

Published: 15th July 2019 12:00 PM  |   Last Updated: 15th July 2019 09:18 AM   |  A+A-


Jimmy Neesham

ಜಿಮ್ಮಿ ನಿಶಾಮ್

Posted By : VS VS
Source : Online Desk
ಲಂಡನ್: ಮಕ್ಕಳೆ ಕ್ರೀಡೆಗಿಂತ ಬೇಕರಿ ಕೆಲಸವನ್ನು ಆಯ್ದುಕೊಳ್ಳಿ ಎಂದು ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನಿಶಾಮ್ ನೋವಿನಿಂದ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸೋಲಿನ ಬಳಿಕ ಟ್ವೀಟ್ ಮಾಡಿರುವ ನಿಶಾಮ್, ಇದು ನಿಜಕ್ಕೂ ನೋವುಂಟು ಮಾಡಿದೆ. ಮುಂದಿನ ಒಂದು ದಶಕದವರೆಗೂ ನಾನು ಇಲ್ಲಿನ ಅರ್ಧಗಂಟೆಯ ಆಟವನ್ನು ನೆನೆಯುವುದಕ್ಕೆ ಇಷ್ಟಪಡುವುದಿಲ್ಲ ಎಂದು ಟ್ವೀಟಿಸಿದ್ದಾರೆ. 

ಇನ್ನೊಂದು ಟ್ವೀಟ್ ನಲ್ಲಿ ಪ್ರತಿ ಹಂತದಲ್ಲೂ ನ್ಯೂಜಿಲ್ಯಾಂಡ್ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ. ನಿಮ್ಮ ಮನದಾಳದ ಮಾತು ನಮ್ಮ ಕಿವಿಗೆ ಮುಟ್ಟುತ್ತಿತ್ತು. ಗೆದ್ದೇ ತೀರುವ ಹಂಬಲ ನಮ್ಮದಾಗಿತ್ತು. ಆದರೆ ಜಯ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳೇ ಕ್ರೀಡೆಯನ್ನು ನಿಮ್ಮ ವೃತ್ತಿಯಾಗಿಸಿಕೊಲ್ಳಬೇಡಿ ಅದರ ಬದಲು ಬೇಕರಿ ಕೆಲಸವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. 

ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸೂಪರ್ ಓವರ್ ನಲ್ಲೂ ಪಂದ್ಯ ಟೈ ಆಗಿದ್ದು ಬಳಿಕ ಹೆಚ್ಚು ಬೌಂಡರಿ ಹೊಡೆದ ಇಂಗ್ಲೆಂಡ್ ಚಾಂಪಿಯನ್ ಎಂದು ಘೋಷಿಸಲಾಯಿತು. 
Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp