'ಅತ್ಯಂತ ಕ್ರೂರ'..!, ಬೌಂಡರಿ ಲೆಕ್ಕಾಚಾರದಲ್ಲಿ ವಿಶ್ವಕಪ್ ವಿಜೇತರ ಘೋಷಣೆಗೆ ಮಾಜಿ ಕ್ರಿಕೆಟಿಗರ ಆಕ್ರೋಶ!

ವಿಶ್ವಕಪ್ ಫೈನಲ್ ನ ಸೂಪರ್ ಓವರ್ ಸಹ ಟೈ ಆದರೂ, ಹೆಚ್ಚು ಬೌಂಡರಿ ಬಾರಿಸಿದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಣೆ ಮಾಡಿದ್ದನ್ನು, ಮಾಜಿ ಕ್ರಿಕೆಟ್ ಆಟಗಾರರು ತೀವ್ರವಾಗಿ ವಿರೋಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವಕಪ್ ಫೈನಲ್ ನ ಸೂಪರ್ ಓವರ್ ಸಹ ಟೈ ಆದರೂ, ಹೆಚ್ಚು ಬೌಂಡರಿ ಬಾರಿಸಿದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಣೆ ಮಾಡಿದ್ದನ್ನು, ಮಾಜಿ ಕ್ರಿಕೆಟ್ ಆಟಗಾರರು ತೀವ್ರವಾಗಿ ವಿರೋಧಿಸಿದ್ದಾರೆ.
ಪ್ರಮುಖವಾಗಿ ಐಸಿಸಿ ಈ ನಿಯಮದ ವಿರುದ್ಧ ಬಹಿರಂಗವಾಗಿಯೇ ಮಾಜಿ ಆಟಗಾರರು ಕೆಂಡಾಮಂಡಲರಾಗಿದ್ದು, ಐಸಿಸಿಯ ನಿಯಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ವೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸುವ ಬದಲು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡವನ್ನು ಜಂಟಿ ವಿಜೇತರು ಎಂದು ಘೋಷಣೆ ಮಾಡಬೇಕಿತ್ತು ಎಂದು ಆಗ್ರಹಿಸಿದ್ದಾರೆ. ಅಂತೆಯೇ ಬೌಂಡರಿ ಲೆಕ್ಕಾಚಾರದಲ್ಲಿ ವಿಜೇತರನ್ನು ಘೋಷಿಸಿದ ಐಸಿಸಿ ನಿಯಮದ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ.
ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಕಿವೀಸ್ ತಂಡವನ್ನು ಮಣಿಸಿ ಇಂಗ್ಲೆಂಡ್ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿ ಸಂಭ್ರಮಿಸಿತ್ತು. ಎರಡೂ ತಂಡಗಳು 50 ಓವರ್ ಗಳಲ್ಲಿ 241 ರನ್ ಬಾರಿಸಿದ್ದವು. ಇದಾದ ಬಳಿಕ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ ನಲ್ಲೂ ಎರಡೂ ತಂಡಗಳು 15-15 ರನ್ ಬಾರಿಸಿದ್ದವು. ಐಸಿಸಿ ನಿಯಮದಂತೆ ಸೂಪರ್ ಓವರ್ ಟೈ ಆಗಿದ್ದರಿಂದ, ಇಂಗ್ಲೆಂಡ್ 50 ಓವರ್ ಗಳಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿತ್ತು. ನ್ಯೂಜಿಲೆಂಡ್ 16 ಬೌಂಡರಿ ಬಾರಿಸಿದರೆ, ಇಂಗ್ಲೆಂಡ್ 24 ಬಾರಿ ಚೆಂಡಿಗೆ ಬೌಂಡರಿ ಗೆರೆಯ ದರ್ಶನವನ್ನು ಮಾಡಿಸಿತ್ತು. ಈ ಅಂಕಿ ಅಂಶಗಳ ಆಧಾರದ ಮೇಲೆ ಮಾರ್ಗನ್ ಪಡೆ ಜಯ ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com