ಅಚ್ಚರಿಯಾದ್ರೂ ಸತ್ಯ... ಕಿವೀಸ್ ವಿಶ್ವಕಪ್ ಕನಸಿಗೆ ತಣ್ಣೀರೆರಚಿದ ಬೆನ್ ಸ್ಟೋಕ್ಸ್ ಗೇ 'ವರ್ಷದ ನ್ಯೂಜಿಲೆಂಡರ್ ಪ್ರಶಸ್ತಿ'..?

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಯ ವಿಶ್ವಕಪ್ ಕನಸನ್ನು ನುಚ್ಚು ನೂರು ಮಾಡಿದ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರ ಹೆಸರನ್ನು 'ವರ್ಷದ ನ್ಯೂಜಿಲೆಂಡರ್' ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

Published: 19th July 2019 12:00 PM  |   Last Updated: 19th July 2019 12:57 PM   |  A+A-


Ben Stokes, Kane Williamson nominated for 'New Zealander of the Year' award

ಸಂಗ್ರಹ ಚಿತ್ರ

Posted By : SVN SVN
Source : Associated Press
ವೆಲ್ಲಿಂಗ್ಟನ್‌: ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಯ ವಿಶ್ವಕಪ್ ಕನಸನ್ನು ನುಚ್ಚು ನೂರು ಮಾಡಿದ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರ ಹೆಸರನ್ನು 'ವರ್ಷದ ನ್ಯೂಜಿಲೆಂಡರ್' ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ಹೌದು.. ಕಳೆದ ಭಾನುವಾರ ಇಂಗ್ಲೆಂಡ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪರವಾಗಿ 84 ರನ್ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಬೆನ್ ಸ್ಟೋಕ್ಸ್ ಅಕ್ಷರಶಃ ನ್ಯೂಜಿಲೆಂಡ್ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ವಿಲನ್ ಆಗಿದ್ದರು. ತಮ್ಮ ರೋಚಕ ಆಟದ ಮೂಲಕ ದಶಲಕ್ಷ ಕಿವೀಸ್‌ ಅಭಿಮಾನಿಗಳ ಹೃದಯ ಮುರಿದಿದ್ದ ಇಂಗ್ಲೆಂಡ್‌ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು "ವರ್ಷದ ನ್ಯೂಜಿಲೆಂಡರ್‌" ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಬೆನ್ ಸ್ಟೋಕ್ಸ್ ಅವರೊಂದಿಗೇ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ಹೆಸರನ್ನೂ ನಾಮ ನಿರ್ದೇಶನ ಮಾಡಲಾಗಿದೆ. 

ಇದೇ ಜುಲೈ 14 ರಂದು ಲಂಡನ್‌ನ ದಿ ಲಾರ್ಡ್ಸ್ ಅಂಗಳದಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 241 ರನ್‌ ಹಿಂಬಾಲಿಸಿದ್ದ ಇಂಗ್ಲೆಂಡ್‌, ಬೆನ್‌ ಸ್ಟೋಕ್ಸ್‌ ಗಳಿಸಿದ 84 ರನ್‌ ನೆರವಿನಿಂದ ಟೈ ಮಾಡಿಕೊಂಡಿತ್ತು. ನಂತರ ಸೂಪರ್‌ ಓವರ್‌ನಲ್ಲೂ ಪಂದ್ಯ ಟೈ ಆದಾಗ ಬೌಂಡರಿ ನಿಮಯದ ಅನುಸಾರ ಇಂಗ್ಲೆಂಡ್‌ ಚೊಚ್ಚಲ ಚಾಂಪಿಯನ್‌ ಆಗಿತ್ತು.

ಇನ್ನು ಬೆನ್ ಸ್ಟೋಕ್ಸ್ ತಂದೆ ಗೆರಾರ್ಡ್ ಸ್ಟೋಕ್ಸ್ ಮೂಲತಃ ನ್ಯೂಜಿಲೆಂಡ್ ನವರಾಗಿದ್ದು, ರಗ್ಬಿ ಕೋಚ್ ಹುದ್ದೆಗಾಗಿ ಇಂಗ್ಲೆಂಡ್ ಆಗಮಿಸಿದ್ದರು. ಗೆರಾರ್ಡ್ ಕುಟುಂಬ ಇಂಗ್ಲೆಂಡ್ ಗೆ ಬಂದಾಗ ಅವರ ಮಗ ಬೆನ್ ವಯಸ್ಸು ಕೇವಲ 14 ವರ್ಷ. ಆ ಬಳಿಕ ವಿದ್ಯಾಬ್ಯಾಸವನ್ನೂ ಇಂಗ್ಲೆಂಡ್ ನಲ್ಲೇ ಮಾಡಿದ ಬೆನ್ ಕ್ರಿಕೆಟ್ ನತ್ತ ಹೆಚ್ಚು ಒಲವು ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಸ್ಥಳೀಯ ಕ್ರಿಕೆಟ್ ಕ್ಲಬ್ ಗೆ ಸೇರಿಸಲಾಯಿತು. ಆ ಬಳಿಕ ಗೆರಾರ್ಡ್ ಕುಟುಂಬ ಅಲ್ಲಿಯೇ ನೆಲೆಯೂರಿತು. ಬೆನ್ ಸ್ಟೋಕ್ಸ್ ಕೂಡ ಇಂಗ್ಲೆಂಡ್ ಪರವಾಗಿಯೇ ಕ್ರಿಕೆಟ್ ಆಡಲು ಶುರು ಮಾಡಿದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp