ಸಚಿನ್‌ ತೆಂಡೂಲ್ಕರ್‌ ಗೆ 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವ

ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಹಾಗೂ ದಕ್ಷಿಣ ಆಫ್ರಿಕಾದ ಅಲಾನ್‌ ಡೊನಾಲ್ಡ್‌ ಹಾಗೂ ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಅವರು 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವಕ್ಕೆ ಭಾಜನರಾಗಿದ್ದಾರೆ.
ಸಚಿನ್‌ ತೆಂಡೂಲ್ಕರ್‌ ಗೆ 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವ
ಸಚಿನ್‌ ತೆಂಡೂಲ್ಕರ್‌ ಗೆ 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವ
ನವದೆಹಲಿ: ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಹಾಗೂ ದಕ್ಷಿಣ ಆಫ್ರಿಕಾದ ಅಲಾನ್‌ ಡೊನಾಲ್ಡ್‌ ಹಾಗೂ ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಅವರು 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವಕ್ಕೆ ಭಾಜನರಾಗಿದ್ದಾರೆ.
200 ಟೆಸ್ಟ್ ಪಂದ್ಯಗಳಾಡಿರುವ ಭಾರತದ ಮಾಜಿ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌ ಟೆಸ್ಟ್ ವಿಭಾಗದಲ್ಲಿ ಅತಿ ಹೆಚ್ಚು ರನ್‌ ಹಾಗೂ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಮಾಡಿದ್ದಾರೆ. ಈ ಗೌರವ ಸ್ವೀಕರಿಸುತ್ತಿರುವ ಭಾರತದ ಆರನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕನಿಷ್ಠ ಐದು ವರ್ಷಗಳಾಗಿರಬೇಕು ಹಾಗೂ ಕ್ರಿಕೆಟ್‌ನಲ್ಲಿ ಅದ್ವಿತೀಯ ಸಾಧನೆ ಮಾಡಿದ ಆಟಗಾರನಿಗೆ ಈ ಗೌರವವನ್ನು ಐಸಿಸಿ ನೀಡುತ್ತದೆ. ಸಚಿನ್‌ ಕೊನೆಯ ಬಾರಿ 2013ರ ನವೆಂಬರ್‌ನಲ್ಲಿ ಕೊನೆಯ ಟೆಸ್ಟ್‌ ಪಂದ್ಯವಾಡಿದ್ದರು. 
ಗುರುವಾರ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಐಸಿಸಿ ಹಾಲ್‌ ಆಫ್‌ ಫೇಮ್‌' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿನ್‌ ತೆಂಡೂಲ್ಕರ್‌, "ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ನನ್ನ ಜತೆಗಿದ್ದ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಪೋಷಕರು, ಸಹೋದರ ಅಜಿತ್‌ ಹಾಗೂ ಪತ್ನಿ ಅಂಜಲಿ ನನ್ನ ಸಾಮಾರ್ಥ್ಯದ ಆಧಾರ ಸ್ಥಂಭಗಳು. ವಿಶೇಷವಾಗಿ  ರಮಾಕಾಂತ್ ಆರ್ಚೆಕರ್‌ ಅವರ ಬಳಿ ಮೆಂಟರ್‌, ಮಾರ್ಗದರ್ಶನ ಪಡೆದಿರುವುದು ನಾನು ಅದೃಷ್ಟವಂತ ಎಂದು ಸ್ಮರಿಸಿದರು.    
ದಕ್ಷಿಣ ಆಫ್ರಿಕಾ ವೇಗಿ ಅಲಾನ್‌ ಡೊನಾಲ್ಡ್ 272 ಟೆಸ್ಟ್‌ ಪಂದ್ಯಗಳಲ್ಲಿ 330 ವಿಕೆಟ್‌ ಕಬಳಿಸಿ ಸಾಧನೆ ಮಾಡಿದ್ದಾರೆ. 2003ರ ಫ್ರೆಬ್ರವರಿಯಲ್ಲಿ ತನ್ನ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. ಇನ್ನು, ಆಸ್ಟ್ರೇಲಿಯಾದ ಮಹಿಳಾ ವೇಗಿ ಆಟಗಾರ್ತಿ  ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಅವರು ಹಾಲ್‌ ಆಫ್‌ ಫೇಮ್‌ ಪಡೆದ ಆಸೀಸ್‌ನ ಎಂಟನೇಯವರಾಗಿದ್ದಾರೆ. ಇವರ 16 ವರ್ಷಗಳ ವೃತ್ತಿ ಜೀವನದಲ್ಲಿ ಒಟ್ಟು 180 ವಿಕೆಟ್‌ ಪಡೆದಿದ್ದಾರೆ. 13 ಟೆಸ್ಟ್‌ ಪಂದ್ಯಗಳಲ್ಲಿ 60 ವಿಕೆಟ್‌ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com