ಸದ್ಯಕ್ಕೆ ಧೋನಿಗೆ ನಿವೃತ್ತಿ ಯೋಚನೆಯಿಲ್ಲ- ಆಪ್ತಮಿತ್ರ

ವಿಶ್ವ ಶ್ರೇಷ್ಟ ಆಟಗಾರ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸದ್ಯಕ್ಕೆ ನಿವೃತ್ತಿ ಹೊಂದುವ ಯೋಚನೆಯಿಲ್ಲ ಎಂದು ಅವರ ಆಪ್ತಮಿತ್ರ ಹಾಗೂ ವ್ಯವಹಾರಿಕ ಪಾಲುದಾರ ಅರುಣ್ ಪಾಂಡೆ ಹೇಳಿದ್ದಾರೆ.

Published: 20th July 2019 12:00 PM  |   Last Updated: 20th July 2019 10:56 AM   |  A+A-


MS Dhoni

ಮಹೇಂದ್ರ ಸಿಂಗ್ ಧೋನಿ

Posted By : ABN ABN
Source : Online Desk
ನವದೆಹಲಿ:ವಿಶ್ವ ಶ್ರೇಷ್ಟ ಆಟಗಾರ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸದ್ಯಕ್ಕೆ ನಿವೃತ್ತಿ ಹೊಂದುವ ಯೋಚನೆಯಿಲ್ಲ ಎಂದು ಅವರ ಆಪ್ತಮಿತ್ರ ಹಾಗೂ ವ್ಯವಹಾರಿಕ ಪಾಲುದಾರ ಅರುಣ್ ಪಾಂಡೆ ಹೇಳಿದ್ದಾರೆ.

ವಿಶ್ವಕಪ್ ಉಪಾಂತ್ಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಧೋನಿ ಭವಿಷ್ಯದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ.ಸೆಮಿಫೈನಲ್ ನಲ್ಲಿ ಧೋನಿ ಅರ್ಧಶತಕ ಗಳಿಸಿದ್ದರೂ ಕಿವೀಸ್ ಎದುರು ಭಾರತ ಸೋತ ನಂತರ ಅವರ ಕ್ರಿಕೆಟ್ ಬದುಕು ಮುಗಿದ ಅಧ್ಯಾಯ. ಅವರು ನಿವೃತ್ತಿಯಾಗಲಿದ್ದಾರೆ ಎಂಬಂತಹ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ.

 ಆದರೆ.''ಧೋನಿ ಸದ್ಯಕ್ಕೆ ನಿವೃತ್ತಿಯಾಗುವ ಯೋಚನೆ ಇಲ್ಲ''ಅತ್ತುತ್ತಮ ಆಟಗಾರರನ ಭವಿಷ್ಯ ಬಗ್ಗೆ ನಿರಂತರವಾಗಿ ಕೇಳಿಬರುತ್ತಿರುವ ಊಹಾಪೋಹಗಳು ದುರಾದೃಷ್ಟಕರ ಎಂದು ಪಾಂಡೆ ಹೇಳಿದ್ದಾರೆ.

 ವೆಸ್ಟ್ ಇಂಡಿಸ್ ವಿರುದ್ಧದ ಪ್ರವಾಸಕ್ಕೆ ಆಗಸ್ಟ್ 3 ರಂದು ಬಿಸಿಸಿಐ ತಂಡವನ್ನು ಆಯ್ಕೆ ಮಾಡಲಿದೆ.  ಈ ಹಿನ್ನೆಲೆಯಲ್ಲಿ ಅರುಣ್ ಪಾಂಡೆ ಹೇಳಿಕೆ ಮಹತ್ವ ಪಡೆದುಕೊಂಡಿದೆ.  ಎರಡು ಬಾರಿ ವಿಶ್ವಕಪ್ ತಂದುಕೊಟ್ಟ ಆಟಗಾರನೊಂದಿಗೆ ಬಿಸಿಸಿಐ ಅಧಿಕಾರಿಗಳು ಮಾತುಕತೆ ನಡೆಸುವ ಸಾಧ್ಯತೆ ಇದೆ.

ಅರುಣ್ ಪಾಂಡೆ ಧೋನಿ ಅವರ ಬಹು ಕಾಲದ ಆಪ್ತ ಮಿತ್ರರಾಗಿದ್ದು, ಕ್ರೀಡಾ ನಿರ್ವಹಣಾ ಕಂಪನಿಯೊಂದರ ಮುಖ್ಯಸ್ಥರಾಗಿರುವುದಲ್ಲದೇ ಧೋನಿಯ ಬಹುಪಾಲು ವ್ಯವಹಾರದ ಪಾಲುದಾರರಾಗಿದ್ದಾರೆ. ಧೋನಿ ಭವಿಷ್ಯ ಆಯ್ಕೆದಾರರಿಗೆ ತಲೆನೋವಾಗಿ ಪರಿಣಮಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕೆ ಧೋನಿ ಅವರನ್ನು ಆಯ್ಕೆ ಮಾಡಬೇಕೋ ಅಥವಾ ಮಾಡಬಾರದೋ ಎಂಬ ಚಿಂತೆಯಲ್ಲಿದ್ದಾರೆ. 

ಈ ಮಧ್ಯೆ ಧೋನಿ ನಿವೃತ್ತಿಯಾಗಬೇಕೆಂಬ ಒತ್ತಡವೂ ಕ್ರಿಕೆಟ್ ವಲಯದಲ್ಲಿಯೇ ತೀವ್ರಗೊಂಡಿದೆ. 38 ವರ್ಷದ ಧೋನಿ ರಾಜೀನಾಮೆ ನೀಡುವುದೇ ಸೂಕ್ತ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

ಧೋನಿ ನಾಯಕತ್ವದಲ್ಲಿ ಐಸಿಸಿ ವಿಶ್ವಕಪ್, ಟಿ-20 ಹಾಗೂ ಚಾಂಫಿಯನ್ಸ್ ಟ್ರೋಫಿಯನ್ನು ಟೀಂ ಇಂಡಿಯಾ ಗೆದಿದ್ದೆ. ರಾಂಚಿಯ ಧೋನಿ 350 ಏಕದಿನ, 90 ಟೆಸ್ಟ್ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ.  ಏಕದಿನ ಪಂದ್ಯಗಳಲ್ಲಿ 50 ರ ಸರಾಸರಿಯಲ್ಲಿ  10 ಸಾವಿರದ 773 ರನ್ ಹಾಗೂ ಟೆಸ್ಟ್ ನಲ್ಲಿ 38. 09ರ ಸರಾಸರಿಯಲ್ಲಿ 4876 ರನ್ ಗಳಿಸಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp