ಐಸಿಸಿ ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಕೊನೆಗೂ ಮೌನ ಮುರಿದ ಅಂಪೈರ್ ಧರ್ಮಸೇನಾ ಹೇಳಿದ್ದೇನು..?

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪು ನೀಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಅಂಪೈರ್ ಕುಮಾರ ಧರ್ಮಸೇನಾ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
ಲಂಡನ್: ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪು ನೀಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಅಂಪೈರ್ ಕುಮಾರ ಧರ್ಮಸೇನಾ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
ಲಾರ್ಡ್ಸ್ ನಲ್ಲಿ ನಡೆದ ಫೈನಲ್ ಪಂದ್ಯ ಅಂತಿಮ ಓವರ್ ನಲ್ಲಿ ಅಂಪೈರ್ ಕುಮಾರ ಧರ್ಮಸೇನಾ ಓವರ್ ಥ್ರೋ ಗೆ ಆರು ರನ್ ನೀಡಿದ್ದರು. ಆದರೆ ಆ ಬಳಿಕ ಇದು ತಪ್ಪು... ಬ್ಯಾಟಿಂಗ್ ತಂಡಕ್ಕೆ ಐದು ರನ್ ನೀಡಬೇಕಿತ್ತು ಎಂದು ಮತ್ತೋರ್ವ ಐಸಿಸಿ ಅಂಪೈರ್ ಸೈಮನ್ ಟಫೆಲ್ ಹೇಳಿದ್ದರು. ಅಂಪೈರ್ ಕುಮಾರ ಧರ್ಮಸೇನಾ ತೀರ್ಪು ಮತ್ತು ಐಸಿಸಿ ನಿಯಮದ ವಿರುದ್ದ ಆಕ್ರೋಶಗಳು ವ್ಯಕ್ತವಾಗಿತ್ತು. 
ಇದೀಗ ಕೊನೆಗೂ ತಮ್ಮ ಓವರ್ ಥ್ರೋ ವಿವಾದದ ಕುರಿತು ಶ್ರೀಲಂಕಾ ಮೂಲದ ಅಂಪೈರ್ ಕುಮಾರ ಧರ್ಮಸೇನಾ ಮೌನ ಮುರಿದಿದ್ದು, ತಮ್ಮ ತಪ್ಪೊಪ್ಪಿಕೊಂಡಿದ್ದಾರೆ. 'ತಪ್ಪು ತೀರ್ಪು ನೀಡಿರುವುದು ನೋವು ತಂದಿದೆ. ನಾನು ಲೆಗ್ ಅಂಪೈರ್ ಜೊತೆ ಚರ್ಚಿಸಿ 6 ರನ್ ನೀಡಿದ್ದೆ. ಇದು ತಪ್ಪಾಗಿದೆ' ಎಂದು ಧರ್ಮಸೇನಾ ಹೇಳಿದ್ದಾರೆ. 
ಅಂದು ನಡೆದ ಪಂದ್ಯದಲ್ಲಿ ಫೈನಲ್ ಓವರ್ ನ ಅಂತಿಮ ಹಂತದಲ್ಲಿ ಬೆನ್ ಸ್ಟೋಕ್ಸ್ 2ನೇ ರನ್ ಪೂರೈಸೋ ಮೊದಲೇ ಗಪ್ಟಿಲ್ ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್‌ ಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಹೀಗಾಗಿ ಅಂಪೈರ್ 2+4 ಓಟ್ಟು 6  ಓವರ್ ಥ್ರೋ ರನ್ ನೀಡಿದ್ದರು. ಆದರೆ ನಿಯಮದ ಪ್ರಕಾರ ಸ್ಟೋಕ್ಸ್ 2 ರನ್ ಪೂರೈಸೋ ಮುನ್ನವೇ ಓವರ್ ಥ್ರೋ ನಿಂದಾಗಿ ಚೆಂಡು ಬ್ಯಾಟ್‌ ಗೆ ತಾಗಿ ಬೌಂಡರಿ ಹೋಗಿತ್ತು. ಹೀಗಾಗಿ 1+4 ಓಟ್ಟು 5 ರನ್ ಮಾತ್ರ ನೀಡಬೇಕಿತ್ತು. 
ಟಿವಿಯಲ್ಲಿ ರಿಪ್ಲೇ ನೋಡುವಾಗ ಈ ತಪ್ಪು ಸ್ಪಷ್ಟವಾಗಿತ್ತು. ಧರ್ಮಸೇನಾ ನೀಡಿದ ಹೆಚ್ಚುವರಿ ರನ್‌ನಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಬಳಿಕ ಸೂಪರ್ ಓವರ್ ಕೂಡ ಟೈನಲ್ಲಿ ಅಂತ್ಯಗೊಂಡ ಕಾರಣ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್‌ ಗೆ ಗೆಲುವು ಘೋಷಿಸಲಾಯಿತು. ಒಂದು ವೇಳೆ ಆ ಒಂದು ಹೆಚ್ಚುವರಿ ರನ್ ಇಂಗ್ಲೆಂಡ್ ಗೆ ದೊರೆಯದೇ ಹೋಗಿದ್ದರೆ ನ್ಯೂಜಿಲೆಂಡ್ ಚಾಂಪಿಯನ್ ಆಗುವ ಸಾಧ್ಯತೆ ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com