ಏಕದಿನ ತಂಡಕ್ಕೆ ಶುಭಮನ್ ಗಿಲ್, ರಹಾನೆ ಆಯ್ಕೆಯಾಗದಿರುವುದು ಶಾಕ್ ಆಗಿದೆ: ಸೌರವ್ ಗಂಗೂಲಿ

ವಿಶ್ವಕಪ್ ಟೂರ್ನಿಯಿಂದ ಹೊರಬಂದಿರುವ ಟೀಂ ಇಂಡಿಯಾ ಮುಂದೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಇದಕ್ಕಾಗಿ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು ತಂಡದಲ್ಲಿ...
ಸೌರವ್ ಗಂಗೂಲಿ
ಸೌರವ್ ಗಂಗೂಲಿ
ನವದೆಹಲಿ: ವಿಶ್ವಕಪ್ ಟೂರ್ನಿಯಿಂದ ಹೊರಬಂದಿರುವ ಟೀಂ ಇಂಡಿಯಾ ಮುಂದೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಇದಕ್ಕಾಗಿ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು ತಂಡದಲ್ಲಿ ಶುಭ್ಮನ್ ಗಿಲ್ ಮತ್ತು ಅಜಿಂಕ್ಯ ರಹಾನೆಗೆ ಸ್ಥಾನ ಸಿಕ್ಕದಿರುವುದಕ್ಕೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧದ ಸರಣಿಯಲ್ಲಿ ಶುಭ್ಮನ್ ಗಿಲ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದು 218 ರನ್ ಪೇರಿಸಿದ್ದಾರೆ. ಉತ್ತಮ ಫಾರ್ಮ್ ನಲ್ಲಿರುವ ಗಿಲ್ ರನ್ನು ಕೇದಾರ್ ಜಾದವ್ ಬದಲಿಗೆ ಆಯ್ಕೆ ಮಾಡಬಹುದಿತ್ತು ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ. 
ಕ್ರಿಕೆಟ್ ನ ಮೂರು ಮಾದರಿಗಳಿಗೂ ಒಂದೇ ಆಟಗಾರರನ್ನು ಆಯ್ಕೆ ಮಾಡುವ ಸಮಯ ಬಂದಿದೆ. ಇನ್ನು ಮೂರು ಮಾದರಿಯಲ್ಲೂ ತುಂಬಾ ಕಡಿಮೆ ಆಟಗಾರರು ಆಡುತ್ತಿದ್ದಾರೆ. ದೊಡ್ಡ ತಂಡಗಳು ಸ್ಥಿರ ಆಟಗಾರರನ್ನು ಹೊಂದಿದ್ದವು. ಇದು ಎಲ್ಲರನ್ನು ಸಂತೋಷಪಡಿಸುವ ಬಗ್ಗೆ ಅಲ್ಲ. ಆದರೆ ಅತ್ಯುತ್ತಮವಾದದ್ದನ್ನು ಆರಿಸುವುದು ದೇಶಕ್ಕೆ ಮತ್ತು ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಅವಕಾಶ ಸಿಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. 
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಮತ್ತು ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com