ಇನ್‌ಸ್ಟಾಗ್ರಾಮ್ ಶ್ರೀಮಂತ ಕ್ರೀಡಾಪಟು ಪಟ್ಟಿ: ವಿರಾಟ್ ಕೊಹ್ಲಿಯ ಒಂದು ಪೋಸ್ಟ್‌ಗೆ 1.35 ಕೋಟಿ ರೂ.!

ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಅತೀ ಹೆಚ್ಚು ಹಣ ಗಳಿಸುವವರ ಪೈಕಿ ಫುಟ್ಬಾಲ್ ಆಟಗಾರರೇ ಹೆಚ್ಚಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಕ್ರಿಕೆಟ್ ನ ಆಟಗಾರ ಟೀಂ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಅತೀ ಹೆಚ್ಚು ಹಣ ಗಳಿಸುವವರ ಪೈಕಿ ಫುಟ್ಬಾಲ್ ಆಟಗಾರರೇ ಹೆಚ್ಚಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಕ್ರಿಕೆಟ್ ನ ಆಟಗಾರ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಟಾಪ್ ಟೆನ್ ನಲ್ಲಿ ಸ್ಥಾನಪಡೆದಿದ್ದಾರೆ.
ಇನ್ ಸ್ಟಾಗ್ರಾಮ್ ಶ್ರೀಮಂತ ಕ್ರೀಡಾಪಟುಗಳ ಟಾಪ್ ಟೆನ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 9ನೇ ಸ್ಥಾನ ಪಡೆದಿದ್ದಾರೆ. ಇನ್ನು ಇಲ್ಲಿ ಒಂದು ಪೋಸ್ಟ್ ಗೆ ವಿರಾಟ್ ಕೊಹ್ಲಿ 1.35 ಕೋಟಿ ರುಪಾಯಿ ಪಡೆದುಕೊಳ್ಳುತ್ತಿದ್ದಾರೆ. 
ಪೋರ್ಚುಗಲ್ ನ ಫುಟ್ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೊ 6.73 ಕೋಟಿ ರುಪಾಯಿ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ನೇಮರ್(4.97 ಕೋಟಿ), ಲಿಯೋನೆಲ್ ಮೆಸ್ಸಿ(4.47 ಕೋಟಿ), ಡೇವಿಡ್ ಬೆಕ್ ಹ್ಯಾಂ(2.46 ಕೋಟಿ), ಲೆಬ್ರಾನ್ ಜೇಮ್ಸ್(1.87 ಕೋಟಿ) ಪಡೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com